ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಗಳಂತೆಯೇ ಮದುವೆಯಾದ ಗೃಹಿಣಿಯರಿಗೆಂದೇ ಮಿಸಸ್ ಇಂಡಿಯಾ, ಮಿಸಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಗಳು ಆಗಾಗ ನಡೆಯುತ್ತವೆ. ಇತ್ತೀಚೆಗಷ್ಟೇ `ಏಷಿಯಾ ಪೆಸಿಫಿಕ್ ಇಂಟರ್‌ನ್ಯಾಷನಲ್ ಫ್ಯಾಷನ್ ಶೋ ೨೦೨೨' ದೂರದ ಮಸ್ಕಟ್‌ನಲ್ಲಿ ನಡೆಯಿತು. ಭಾರತ, ಓಮನ್, ಫಿಲಪ್ಪೀನ್ಸ್, ಇರಾನ್, ಇಂಡೋನೇಷಿಯಾ, ಸೂಡಾನ್, ಶ್ರೀಲಂಕಾ ಸೇರಿದಂತೆ ಹಲವಾರು ದೇಶಗಳಿಂದ ಈ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ವಿಶೇಷ ಅಂದರೆ ಈ ಅಂತಾರಾಷ್ಟಿçÃಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಕನ್ನಡತಿ ಲಯನ್ ಸತ್ಯವತಿ ಬಸವರಾಜ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತು ಅನೇಕ ಟಾಸ್ಕ್ಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಮತ್ತು ಕೌಶಲ್ಯದಿಂದ `ಮಿಸಸ್ ಯೂನಿವರ್ಸ್' ಗೆದ್ದು ಬೀಗಿದ್ದಾರೆ. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಮಸ್ಕಟ್‌ನ ರಕ್ಷಣಾ ಸಚಿವರು ಸಹ ಭಾಗಿಯಾಗಿದ್ದರು.
ಸೌಂದರ್ಯ ಸ್ಪರ್ಧೆಗಳು ಲಯನ್ ಸತ್ಯವತಿ ಬಸವರಾಜ್ ಅವರಿಗೆ ಹೊಸದೇನಲ್ಲ. ಏಕೆಂದರೆ ಅವರು ಈ ಹಿಂದೆ ಡಾರ್ಜಲಿಂಗ್ ಮಿಸಸ್ ಕರ್ನಾಟಕ, ಮಿಸಸ್ ಎಲಿಗೆಂಟ್ ಸೇರಿದಂತೆ ಕೆಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಟೈಟಲ್‌ಗಳನ್ನು ಗೆದ್ದಿದ್ದರು. ವಯಸ್ಸು ಎಂಬುದು ಸಂಖ್ಯೆಯಷ್ಟೇ, ಸಾಧನೆಗೆ ಅದು ಗಣನೆಯಲ್ಲ ಎಂಬುದನ್ನು ಸತ್ಯವತಿ ನಿರೂಪಿಸಿದ್ದಾರೆ. ಪ್ರತಿಷ್ಠಿತ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಸಹ ಅವರನ್ನು ಅಭಿನಂದಿಸಿದೆ.