ಸಿನಿವಾಣಿ

2024ರಲ್ಲಿ ಐಎಂಡಿಬಿಯಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ನಟಿ ಇವರೇ... ಇಲ್ಲಿದೆ ಭಾರತದ ಟಾಪ್ 10 ಕಲಾವಿದರ ಪಟ್ಟಿ! IMDb

IMDb : ಪ್ರಮುಖ ಮನರಂಜನಾ ಪೋರ್ಟಲ್​​ ಐಎಂಡಿಬಿ ( ಇಂಟರ್ನೆಟ್​ ಮೂವಿ ಡೇಟಾಬೇಸ್​) ಇತ್ತೀಚೆಗಷ್ಟೇ ಭಾರತದ ಅತ್ಯಂತ ಜನಪ್ರಿಯ ಕಲಾವಿದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2024 ರಲ್ಲಿ ಐಎಂಡಿಬಿಯಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಕಲಾವಿದರ ವಿವರಗಳನ್ನು ಪ್ರಕಟಿಸಿದೆ. ವಿಶ್ವದಾದ್ಯಂತ 250 ಮಿಲಿಯನ್​ಗೂ ಹೆಚ್ಚು ಪೇಜ್​ ವ್ಯೂವ್ಸ್​ ಆಧಾರದ ಮೇಲೆ ಈ ರ್ಯಾಂಕಿಂಗ್​ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಐಎಂಡಿಬಿ ಹೇಳಿದೆ.

ರಣಬೀರ್​ ಕಪೂರ್​ ಅಭಿನಯದ ಅನಿಮಲ್​ ಸಿನಿಮಾದಲ್ಲಿ ಮೈಚಳಿ ಬಿಟ್ಟು ನಟಿಸುವ ಮೂಲಕ ಭಾರಿ ಸದ್ದು ಮಾಡಿದ ಬಾಲಿವುಡ್​ ಬ್ಯೂಟಿ ತೃಪ್ತಿ ದಿಮ್ರಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ವರ್ಷ ಅವರು 'ಬ್ಯಾಡ್ ನ್ಯೂಸ್', 'ಲೈಲಾ ಮಜ್ನು (ಮರುಬಿಡುಗಡೆ)' ಮತ್ತು 'ಭೂಲ್ ಭುಲೈಯಾ 3' ನಲ್ಲಿ ನಟಿಸಿದರು. ತಮ್ಮ ಬೋಲ್ಡ್​ ಅವತಾರದಿಂದಲೇ ತೃಪ್ತಿ ಎಲ್ಲರ ಗಮನ ಸೆಳೆದರು.

ತೃಪ್ತಿ ದಿಮ್ರಿ ಬಳಿಕ ದೀಪಿಕಾ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಇಶಾನ್ ಖಟ್ಟರ್ ಮತ್ತು ನಾಲ್ಕನೇ ಸ್ಥಾನದಲ್ಲಿ ಬಾಲಿವುಡ್ ಬಾದ್​ಷಾ ಶಾರುಖ್ ಖಾನ್ ಇದ್ದಾರೆ. ಟಾಲಿವುಡ್‌ನ ಯಂಗ್ ರೆಬಲ್ ಸ್ಟಾರ್ ಪ್ರಭಾಸ್, ಸಮಂತಾ ಮತ್ತು ಶೋಭಿತಾ ಧೂಳಿಪಲ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಶೋಭಿತಾ 5ನೇ ಸ್ಥಾನದಲ್ಲಿದ್ದರೆ, ಸಮಂತಾ 8 ಮತ್ತು ಪ್ರಭಾಸ್ 10ನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಕನ್ನಡದ ಯಾವೊಬ್ಬ ಕಲಾವಿದರು ಸ್ಥಾನ ಪಡೆದಿಲ್ಲ.

ಐಎಂಡಿಬಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಕ್ಕೆ ತೃಪ್ತಿ ದಿಮ್ರಿ ಪ್ರತಿಕ್ರಿಯಿಸಿದ್ದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇದು ತನಗೆ ಸಂದ ಗೌರವ. ಅಭಿಮಾನಿಗಳ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಭಾರತದ ಅತ್ಯಂತ ಜನಪ್ರಿಯ ಸ್ಟಾರ್​ಗಳು- IMDb 2024

1. ತೃಪ್ತಿ ದಿಮ್ರಿ

2. ದೀಪಿಕಾ ಪಡುಕೋಣೆ

3. ಇಶಾನ್ ಖಟ್ಟರ್

4. ಶಾರುಖ್ ಖಾನ್

5. ಶೋಭಿತಾ ಧೂಳಿಪಲ

6. ಶಾರ್ವರಿ

7. ಐಶ್ವರ್ಯಾ ರೈ ಬಚ್ಚನ್

8. ಸಮಂತಾ

9. ಆಲಿಯಾ ಭಟ್

10. ಪ್ರಭಾಸ್