ಸಿನಿವಾಣಿ

ಶೀಘ್ರದಲ್ಲಿ ಯುವ ರಾಜಕುಮಾರ್ ಚಿತ್ರದ ಲಾಂಚಿಂಗ್​ ಟ್ರೇಲರ್​; ದೊಡ್ಡಪ್ಪ, ಚಿಕ್ಕಪ್ಪ ಕಡೆಯಿಂದ ಸಿಕ್ತು ಆಶೀರ್ವಾದ

ಬೆಂಗಳೂರು: ಡಾ. ರಾಜ್​ ಮೊಮ್ಮಗ ಯುವ ರಾಜ್​ಕುಮಾರ್ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಆ ಚಿತ್ರಕ್ಕೆ ಸದ್ಯಕ್ಕೆ ಯುವ 01 ಎಂದು ತಾತ್ಕಾಲಿಕ ಶೀರ್ಷಿಕೆ ಸಹ ಇಡಲಾಗಿದ್ದು, ಏಪ್ರಿಲ್​ 24ರ ಡಾ. ರಾಜ್​ ಜನ್ಮದಿನದಂದು ಲಾಂಚ್​ ಮಾಡಲಾಗಿದೆ. ಇದೀಗ ಇದೇ ಚಿತ್ರ ಮತ್ತೊಂದು ವಿಶೇಷ ವಿಡಿಯೋವೊಂದನ್ನು ರಿಲೀಸ್​ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆ ವಿಡಿಯೋ ಬಿಡುಗಡೆಗೂ ಮುನ್ನ ಶಿವರಾಜಕುಮಾರ್ ಮತ್ತು ಪುನೀತ್​ ರಾಜಕುಮಾರ್ ಅವರಿಗೂ ತೋರಿಸಲಾಗಿದ್ದು, ಮಗನಿಗೆ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಕಡೆಯಿಂದ ಆಶೀರ್ವಾದವೂ ಸಿಕ್ಕಿದೆ. ಪುನೀತ್​ ರುದ್ರನಾಗ್​ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ.