ಬಾಲಿವುಡ್‌ನ ಹಲವು ನಟಿಯರು ಇತ್ತಿಚೆಗೆ ತಮಗಾದ ಕಾಸ್ಟಿಂಗ್ ಕೌಚ್ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಕೃತಿ ಕರಬಂಧ ಹೋಟೆಲ್‌ನಲ್ಲಿ ಹಿಡನ್ ಕ್ಯಾಮರಾ ಇದ್ದ ಬಗ್ಗೆ ಹೇಳಿಕೊಂಡಿದ್ದರು.
ಅದೇ ರೀತಿ ಈಗ ‘ಮಿಮಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿರುವ ಬಾಲಿವುಡ್ ನಟಿ ಕೃತಿ ಸನನ್ ಮಾಡೆಲಿಂಗ್ ಮಾಡುತ್ತಿದ್ದ ದಿನಗಳನ್ನು ನೆನೆದು, ಆಗ ಆದ ಅವಮಾನದ ಬಗ್ಗೆ ಹೇಳಿಕೊಂಡಿದ್ದಾರೆ. ‘ಆಗಷ್ಟೇ ಮುಂಬೈಗೆ ಬಂದು ಮಾಡೆಲಿಂಗ್ ಮಾಡುತ್ತಾ ಸಿನಿಮಾಗಳಿಗೆ ಪ್ರಯತ್ನಿಸುತ್ತಿದ್ದೆ. ಟಾಲಿವುಡ್ ನಟ ಮಹೇಶ್ ಬಾಬು ಅಭಿನಯದ ‘ನೇನೊಕ್ಕಡಿನೆ’ ಸಿನಿಮಾದಲ್ಲಿ ನನಗೆ ಮೊದಲ ಅವಕಾಶ ಸಿಕ್ಕಿತ್ತು. ಆಮೇಲೆ ಹಿಂದಿಯಲ್ಲಿ ‘ಹೀರೋಪಂತಿ’ ಚಿತ್ರದಲ್ಲಿ ನಟಿಸಿದೆ. ಇವುಗಳ ಚಿತ್ರೀಕರಣ ಎರಡು ತಿಂಗಳ ಬಳಿಕ ಶುರು ಆಗಲಿದೆ ಎಂದಿದ್ದರು. ಈ ಮಧ್ಯೆ ನನ್ನ ಮೊದಲ ರ‌್ಯಾಂಪ್ ಶೋ ಇತ್ತು. ಅದಕ್ಕೆ ಾರ್ಮ್ ಹೌಸ್ ಒಂದರಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಪ್ರ್ಯಾಕ್ಟೀಸ್ ವೇಳೆ ವಾಕ್ ಮಾಡುವಾಗ ನನ್ನ ಹೀಲ್ಸ್, ಹುಲ್ಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದ ಕಾರಣ ನನಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆಗ ಶೋ ಕೋರಿಯಾಗ್ರರ್ ಅಲ್ಲಿದ್ದ 50 ಮಾಡೆಲ್‌ಗಳ ಮುಂದೆಯೇ ನನಗೆ ಕಟುವಾಗಿ ರೇಗಿದ್ದರು. ಅದರಿಂದ ಬೇಸರವಾಗಿ ಅಲ್ಲೇ ಅಳಲು ಶುರು ಮಾಡಿದ್ದೆ’ ಎಂದು ಹೇಳಿಕೊಂಡಿದ್ದಾರೆ ಕೃತಿ.
ಸದ್ಯ ‘ಗಣಪತ್’, ‘ಹೀರೋಪಂತಿ 2’, ‘ದೋ ಪತ್ತಿ’ ಸಿನಿಮಾಗಳು ಕೃತಿಯ ಲೈನಪ್‌ನಲ್ಲಿವೆ. (ಏಜೆನ್ಸೀಸ್)