ಇಷ್ಟಕ್ಕೂ ಈ ಕ್ಯಾಲೆಂಡರ್ನಲ್ಲಿ ಏನಿದೆ ಎಂಬ ಪ್ರಶ್ನೆ ಬರುವುದು ಸಹಜ. ಇದೊಂದು ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದ್ದು, ಸಾಧಕರ ಕುರಿತಾಗಿದೆ. ವಿಕಲಚೇತನರ ವಿಶಿಷ್ಟ ಸಾಧನೆಗಳನ್ನು ಪರಿಚಯಿಸುವ ಕ್ಯಾಲೆಂಡರ್ ಇದಾಗಿದ್ದು, ಬೇರೆಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕ್ರೀಡಾಪಟುಗಳು, ಮಾಡೆಲ್ಗಳನ್ನು ಅವರ ಕಿರುಪರಿಚಯದೊಂದಿಗೆ ಪರಿಚಯಿಸಲಾಗಿದೆ. ಒಂದೊಂದು ತಿಂಗಳಿಗೆ ಒಬ್ಬೊಬ್ಬರ ಕಿರುಪರಿಚಯ ಹಾಗೂ ಅವರ ಸಾಧನೆಗಳನ್ನೊಳಗೊಂಡ ಕಥೆಗಳು ಎಂಥವರಿಗೂ ಸ್ಪೂರ್ತಿಯ ಚಿಲುಮೆ.
ಇಂಥದ್ದೊಂದು ಸುಂದರ ಪರಿಕಲ್ಪನೆಯ ಕ್ಯಾಲೆಂಡರ್ ಹೊತ್ತು ತಂದಿರುವುದು ಇನ್ವೋಕ್ ಫೌಂಡೇಶನ್. ಈ ಸಂಸ್ಥೆಯ ಸಾಗರ್ಗೆ ಅಪಘಾತವೊಂದರಲ್ಲಿ ಸ್ಪೈನಲ್ ಕಾರ್ಡ್’ಗೆ ಬಲವಾದ ಪೆಟ್ಟು ಬಿದ್ದಿತ್ತು. ಈ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಇನ್ವೋಕ್ ಫೌಂಡೇಶನ್. ಈ ಸಂಸ್ಥೆಯಿಂದ ಮೂಡಿಬಂದಿರುವ ಈ ಕ್ಯಾಲೆಂಡರ್ನ್ನು ಛಾಯಾಗ್ರಾಹಕ ಮತ್ತು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿ, ಸಾಗರ್ ಪರಿಶ್ರಮ ಹಾಗೂ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಿದ್ದಾರೆ.
ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಪ್ಯಾರಾ ಒಲಂಪಿಯನ್ ಶರತ್ ಗಾಯಕ್ವಾಡ್, ಅಡ್ವೆಂಚರ್ ಟೂರಿಸ್ಟ್ ಮಂಜುನಾಥ್ ಚಿಕ್ಕಯ್ಯ, ಫಿಟ್ನೆಸ್ ಶ್ರೀನಿವಾಸ್ ಗೌಡ, ಈಜುಪಟು ಮತ್ತು ಡಾನ್ಸರ್ ಆಗಿರುವ ಜಯಂತ್, ಕ್ರಿಕೆಟರ್ಸ್ ಅಶ್ವಿನಿ-ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್ ಸೇರಿದಂತೆ ಇನ್ನೂ ಅನೇಕರು ಈ ಕ್ಯಾಲೆಂಡರ್’ನಲ್ಲಿದ್ದಾರೆ.
ಮತ್ತೊಂದು ವಿಶೇಷವೆಂದರೆ ಈ ಕ್ಯಾಲೆಂಡರ್ ಫೋಟೋಶೂಟ್ ಹಾಗೂ ಮೇಕಿಂಗ್ ಸಿನಿಮಾ ಕ್ವಾಲಿಟಿಯಲ್ಲಿ ಮಾಡಲಾಗಿದೆ.