ಸಿನಿವಾಣಿ

ಅಮೆಜಾನ್​ ಪ್ರೖೆಮ್​ನಲ್ಲಿ ಕೋಟಿಗೊಬ್ಬ 3; ನ.23ರಿಂದ ಸ್ಟ್ರೀಮಿಂಗ್ ಶುರು?

ಬೆಂಗಳೂರು: ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರವು ವಿಜಯದಶಮಿಯಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಸಾಮಾನ್ಯವಾಗಿ ಎಲ್ಲ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿದ್ದಂತೆಯೇ, ಆ ಚಿತ್ರಗಳು ಓವರ್ ದಿ ಟಾಪ್(ಒಟಿಟಿ)ಯಲ್ಲಿ ಬರುವುದು ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತಿದೆ. ಅದೇ ರೀತಿ, ‘ಕೋಟಿಗೊಬ್ಬ 3’ ಚಿತ್ರವು ಒಟಿಟಿಯಲ್ಲಿ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಸಹ ಎಲ್ಲರಲ್ಲೂ ಇತ್ತು.

ಮೂಲಗಳ ಪ್ರಕಾರ, ನ.23ರಿಂದ ಚಿತ್ರವು ಅಮೆಜಾನ್ ಪ್ರೖೆಮ್ಲ್ಲಿ ಸ್ಟ್ರೀಮ್ ಆಗಲಿದೆ. ಈ ವಿಷಯವನ್ನು ಚಿತ್ರತಂಡವಾಗಲೀ, ಅಮೆಜಾನ್ ಪ್ರೖೆಮ್ವರಾಗಲೀ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಚಿತ್ರವು ಮಂಗಳವಾರದಿಂದ ಸ್ಟ್ರೀಮ್ ಆಗಲಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರವಿಶಂಕರ್, ಮಡೋನಾ ಸೆಬಾಸ್ಟಿಯನ್, ಅಭಿರಾಮಿ, ರಾಜೇಶ್ ನಟರಂಗ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೂರಪ್ಪ ಬಾಬು ನಿರ್ವಣದ ಈ ಚಿತ್ರವನ್ನು ಶಿವಕಾರ್ತಿಕ್ ನಿರ್ದೇ ಶಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.