ಬೆಂಗಳೂರು: ಸ್ಯಾಂಡಲ್ವುಡ್ ಹಾಗೂ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಇಂದು ಕರಾಳ ದಿನ ಎಂದು ಭಾವಿಸಬಹುದಾಗಿದೆ. ಏಕೆಂದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ದಿನ ಮಾಡಿದಂತಹ ಒಂದೇ ಒಂದು ಟ್ವೀಟ್ ಅಸಂಖ್ಯಾತ ಅಭಿಮಾನಿಗಳ ಮನಸ್ಸು ಹಾಗೂ ಸ್ಯಾಂಡಲ್ವುಡ್ಗೆ ಘಾಸಿ ಉಂಟು ಮಾಡಿತ್ತು.
ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ ಕುಚಿಕು ಗೆಳೆಯರಾಗಿದ್ದ ದರ್ಶನ್ ಮತ್ತು ಸುದೀಪ್ ನಡುವಿನ ಸ್ನೇಹ ಅಂತ್ಯವಾಗಿದ್ದು ಇದೇ ದಿನ. ನಾಲ್ಕು ವರ್ಷಗಳ ಹಿಂದೆ ಇದೇ ದಿನದಂದು ಟ್ವೀಟ್ ಮಾಡಿದ್ದ ದರ್ಶನ್, ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಇಂಡಸ್ಟ್ರಿಗೆ ದುಡಿಯುವ ನಟರಷ್ಟೆ. ಈ ಬಗ್ಗೆ ಯಾವುದೇ ವದಂತಿ ಹರಡಬೇಡಿ. ಇದು ಇಲ್ಲಿಗೆ ಮುಗಿಯಲಿ ಎಂದಿದ್ದರು.
ಈ ಒಂದು ಟ್ವೀಟ್ ಇಡೀ ಕರ್ನಾಟಕದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರಿಗೆ ಸಿಡಿಲು ಬಡಿದಂತಾಯಿತು. ಅಷ್ಟು ಚೆನ್ನಾಗಿದ್ದ ಇಬ್ಬರ ನಡುವೆ ಏನು ನಡೆಯಿತು ಎಂಬ ಪ್ರಶ್ನೆ ಇಂದಿಗೂ ಅನೇಕರ ಮನದಲ್ಲಿ ಇಂದಿಗೂ ಉಳಿದಿದೆ. ಈ ಘಟನೆಯಿಂದ ಚಂದನವನ ಇನ್ನೂ ಹೊರಬಂದಿಲ್ಲ. ಇಬ್ಬರನ್ನು ಸೇರಿಸುವ ಅನೇಕ ಪ್ರಯತ್ನಗಳು ಫಲ ನೀಡಲಿಲ್ಲ.
ಇಬ್ಬರು ನಾಲ್ಕು ವರ್ಷದಿಂದ ಒಮ್ಮೆಯು ಮಾತಾಡಿಲ್ಲ. ಕಿಚ್ಚ ಮತ್ತು ದಚ್ಚು ಸ್ನೇಹ ಮೊದಲಿನಂತಾಗುವುದಿಲ್ಲವಾ? ಎಂಬ ಪ್ರಶ್ನೆ ಕಾಡುತ್ತಿದ್ದು, ಕರ್ನಾಟಕ ಸಿನಿಪ್ರಿಯರ ಆಸೆಯು ಸಹ ಇದೆ ಆಗಿದೆ. (ದಿಗ್ವಿಜಯ ನ್ಯೂಸ್)