ಕಿಚ್ಚ ಸುದೀಪ್​ 
ಸಿನಿವಾಣಿ

ನನ್ನ ಲವರ್​ಗೆ ಎಕ್ಸಾಂ ಇದೆ ಶುಭಕೋರಿ ಎಂದ ಅಭಿಮಾನಿ: ಕಿಚ್ಚನ ಪ್ರತಿಕ್ರಿಯೆ ವೈರಲ್​

ಬೆಂಗಳೂರು: ಸದ್ಯ ಮ್ಯಾಕ್ಸ್​ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿರುವ ನಟ ಸುದೀಪ್, ಇತ್ತೀಚೆಗೆ ಬಿಡುವು ಸಿಕ್ಕಾಗಲೆಲ್ಲ ಅಭಿಮಾನಿಗಳ ಜತೆ ಎಕ್ಸ್​ (ಈ ಹಿಂದೆ ಟ್ವಿಟರ್​) ಮೂಲಕ ಮಾತುಕತೆ ನಡೆಸುತ್ತಾರೆ. ಸಿನಿಮಾ, ಕ್ರಿಕೆಟ್​, ಬಿಗ್​ಬಾಸ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಕಿಚ್ಚ ಉತ್ತರ ನೀಡುತ್ತಾರೆ.

ಇಂದು ಕೂಡ ಕಿಚ್ಚ, ಅಭಿಮಾನಿಗಳ ಜತೆ #AskKichcha ಸೆಷನ್ಸ್​ ನಡೆಸಿದರು. 10 ನಿಮಿಷ ಸಮಯವಿದೆ ಏನು ಕೇಳಬೇಕೋ ಕೇಳಿ ಎಂದು ಕಿಚ್ಚ ಹೇಳಿದ್ದೇ ತಡ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳನ್ನು ಕಳುಹಿಸಿದ್ದಾರೆ. ಅವುಗಳಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಕಿಚ್ಚ ಉತ್ತರ ನೀಡಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬನ ಕೋರಿಕೆಗೆ ಕಿಚ್ಚ ಪ್ರತಿಕ್ರಿಯಿಸಿದ ರೀತಿ ವಿಶೇಷ ಗಮನ ಸೆಳೆದಿದೆ.

ಅಷ್ಟಕ್ಕೂ ಅಭಿಮಾನಿ ಕೇಳಿದ್ದೇನು? ಬಾಸ್​ ಇಂದು ನನ್ನ ಹುಡುಗಿಗೆ ಪರೀಕ್ಷೆ ಇದೆ. ಆಕೆಗೆ ಶುಭಕೋರಿ. ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅಭಿಮಾನಿ ಟ್ವೀಟ್​ ಮಾಡಿದ್ದು, ಇದಕ್ಕೆ ಉತ್ತರ ನೀಡಿದ ಕಿಚ್ಚ, ಆಕೆ ಪರೀಕ್ಷೆಗೆ ತಯಾರಿ ನಡೆಸುವುದನ್ನು ನಿಮ್ಮ ಲವ್ ತಡೆಯಲಿಲ್ಲ ಎಂದು ಭಾವಿಸುತ್ತೇವೆ ಸರ್ ಎಂದು ಹೇಳುವ ಮೂಲಕ ಹಾಸ್ಯಚಟಾಕಿ ಹಾರಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮ್ಯಾಕ್ಸ್​ ಚಿತ್ರದ ಶೂಟಿಂಗ್​ ಪೂರ್ಣಗೊಳ್ಳಲಿದೆ ಮತ್ತು ಶೀಘ್ರದಲ್ಲೇ ಮ್ಯಾಕ್ಸ್​ ಅಪ್​ಡೇಟ್​ ಕೂಡ ಬರಲಿದೆ ಎಂದು ಕಿಚ್ಚ ತಿಳಿಸಿದ್ದಾರೆ.