ಸಿನಿವಾಣಿ

ದಾಖಲೆ ಮುರಿದ ಕೆಜಿಎಫ್​​ -2 ಬಿಡುಗಡೆಗೂ ಮೊದಲೇ 20 ಕೋಟಿ ರೂ.ಗಳಿಕೆ !

ಮುಂಬೈ: ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಮಾರುಕಟ್ಟೆ ವಿಸ್ತಾರವಾಗಿ ಬೆಳೆದಿದೆ. ಇದಕ್ಕೆ ಉದಾಹರಣೆಯಾಗಿ ಆರ್​ಆರ್​ಆರ್​ ದಾಖಲೆಯನ್ನೂ ಮೀರಿ ಕೆಜಿಎಫ್​ 2 ಸಿನಿಮಾ ಬಿಡುಗಡೆಗೂ ಮುನ್ನವೇ 20 ಕೋಟಿ ರೂ. ಗಳಿಕೆ ಮಾಡಿದೆ.

ಇದು ಈ ಹಿಂದಿನ ಎಲ್ಲಾ ಸಿನಿಮಾ ಗಳಿಕೆಯನ್ನು ಮೀರಿದೆ. ಹಿಂದಿ ಭಾಷೆಯೊಂದರಲ್ಲೇ ಕೆಜಿಎಫ್​​ ಧೂಳೆಬ್ಬಿಸಿದೆ.

ಆರ್​ಆರ್​ಆರ್​ ಚಿತ್ರ ಬಿಡುಗಡೆಗೂ ಮುನ್ನ 11 ಕೋಟಿ ರೂ. ಗಳಿಕೆ ಕಂಡಿತ್ತು. ಆದರೆ ಯಶ್​ ನಟನೆಯ ಕೆಜಿಎಫ್​ -2 ಈ ಹಿಂದಿನ ಎಲ್ಲಾ ದಾಖಲೆಯನ್ನು ಸರಿಗಟ್ಟಿದ್ದು, ಮುಂಬೈ, ಪುಣೆ ಹಾಗೂ ದೆಹಲಿಯಲ್ಲಿ 2000 ರೂ.ವರೆಗೆ ಟಿಕೆಟ್​ ಮಾರಾಟವಾಗಿದೆ.