ಸಿನಿವಾಣಿ

‘ಕೆಜಿಎಫ್​ ಚಾಪ್ಟರ್​ 2’ ಖಾತೆಗೆ ಮತ್ತೊಂದು ದಾಖಲೆ!

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಟೀಸರ್ ಮೂಲಕವೇ ಸದ್ದು ಮಾಡಿದ್ದು ಹೆಚ್ಚು. ಜನವರಿಯಿಂದ ಇಲ್ಲಿಯವರೆಗೂ ಈ ಚಿತ್ರದ ಟೀಸರ್​ ಬರೋಬ್ಬರಿ 18 ಕೋಟಿ (188 ಮಿಲಿಯನ್)ಗೂ ಅಧಿಕ ಸಲ ವೀಕ್ಷಣೆ ಕಂಡಿದೆ. ಅತೀ ಹೆಚ್ಚು ಲೈಕ್ಸ್ ಪಡೆದ ದಾಖಲೆಯೂ ಈ ಟೀಸರ್​ಗಿದೆ. ಇದೀಗ ಮತ್ತೊಂದು ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್​ ಚಾಪ್ಟರ್ 2 ಚಿತ್ರ ಇದೀಗ ಕಮೆಂಟ್ಸ್​ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಯೂಟ್ಯೂಬ್​ನಲ್ಲಿ ಬರೋಬ್ಬರಿ 1 ಮಿಲಿಯನ್ ಅಂದರೆ 10 ಲಕ್ಷ ಕಮೆಂಟ್​ ಪಡೆದ ಭಾರತದ ಮೊದಲ ಸಿನಿಮಾ ಎನ್ನಲಾಗುತ್ತಿದೆ. ಈಗಾಗಲೇ 83 ಲಕ್ಷ ಲೈಕ್ಸ್ ಪಡೆದು ಅಲ್ಲಿಯೂ ದಾಖಲೆ ನಿರ್ಮಿಸಿದ ಕೆಜಿಎಫ್​ ಇದೀಗ ಕಮೆಂಟ್ಸ್​ ನಲ್ಲಿಯೂ ಮುಂದಿದೆ.

ಇಲ್ಲಿಯವರೆಗೂ ಒಂದು ಮಿಲಿಯನ್ ಕಮೆಂಟ್ಸ್ ಅನ್ನು ಬೇರಾವ ಚಿತ್ರ ಪಡೆದುಕೊಂಡಿಲ್ಲ. ಸದ್ಯ ಈ ದಾಖಲೆ ಮಾಡಿದ ಮೊದಲ ಸಿನಿಮಾ ಕೆಜಿಎಫ್​ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್ ನಟಿಸಿದ್ದು, ಸ್ಟಾರ್ ನಟರ ದಂಡೇ ಈ ಚಿತ್ರದಲ್ಲಿದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.