ಸಿನಿವಾಣಿ

33 ದಿನಕ್ಕೆ 1200 ಕೋಟಿ ರೂ.; ತಿಂಗಳಾದರೂ ನಿಲ್ಲದ ರಾಕಿ ಭಾಯ್ ಓಟ

ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್ 2’ ವೇಗ ತಿಂಗಳಾದರೂ ನಿಂತಿಲ್ಲ. ಏ.14ರಂದು ಬಿಡುಗಡೆಯಾದ ಈ ಚಿತ್ರವು, 33 ದಿನಗಳಲ್ಲಿ 1200 ಕೋಟಿ ರೂ.ಗೂ ಹೆಚ್ಚು ಹಣ ಬಾಚಿಕೊಂಡಿದೆ. ಆ ಮೂಲಕ ‘ದಂಗಲ್’ ಹಾಗೂ ‘ಬಾಹುಬಲಿ 2’ ಬಳಿಕ ಅತೀ ಹೆಚ್ಚು ಗಳಿಕೆ ಮಾಡಿಕೊಂಡ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ವಾರವೇ ಬರೋಬ್ಬರಿ 720 ಕೋಟಿ ರೂ, ಎರಡನೇ ವಾರ 223 ಕೋಟಿ ರೂ, ಮೂರನೇ ವಾರ 140 ಕೋಟಿ ರೂ ಹಾಗೂ ನಾಲ್ಕನೇ ವಾರ 91 ಕೋಟಿ ರೂ ಬಾಚಿಕೊಂಡಿದ್ದ ‘ಕೆಜಿಎಫ್ 2’, ಐದನೇ ವಾರಕ್ಕೆ ಕಾಲಿಟ್ಟ ಕೇವಲ ನಾಲ್ಕು ದಿನಗಳಲ್ಲೇ 25 ಕೋಟಿ ರೂ.ಗೂ ಹೆಚ್ಚು ಹಣ ಗಳಿಕೆ ಮಾಡಿಕೊಂಡಿದ್ದು, ಆ ಮೂಲಕ ಒಟ್ಟಾರೆ ಕಲೆಕ್ಷನ್ 1200 ಕೋಟಿ ರೂ. ದಾಟಿದೆ.

ಒಂದು ವಾರ ಮೊದಲೇ ನೋಡಿ: ಅಮೇಜಾನ್ ಪ್ರೖೆಮ್ಲ್ಲಿ ‘ಕೆಜಿಎಫ್ 2’, ಮೇ. 27ಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನವೇ, ಚಿತ್ರ ವೀಕ್ಷಿಸಲು 199 ರೂ. ಕೊಟ್ಟು ಮನೆಯಲ್ಲಿ ಕುಳಿತು ಸಿನಿಮಾ ನೋಡಬಹುದು. ಅದಕ್ಕೆ ಓಟಿಟಿಯ ಚಂದಾದಾರಿಕೆ ಇರಲೇಬೇಕು ಅಂತೇನಿಲ್ಲ. ಸದಸ್ಯತ್ವ ಪಡೆಯದವರೂ ಸಹ ಮೇ 27ರ ಒಳಗೆ ಚಿತ್ರವನ್ನು ಅಮೇಜಾನ್​ನಲ್ಲಿ ಒಮ್ಮೆ ಹಣ ಕೊಟ್ಟು ವೀಕ್ಷಿಸಬಹುದಾಗಿದೆ.