ಮುಂಬೈ: ಬಾಲಿವುಡ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ದೋಸ್ತಾನಾ 2 ಸಿನಿಮಾದಿಂದ ನಟ ಕಾರ್ತಿಕ್ ಆರ್ಯನ್ ಅವರನ್ನು ಕೈ ಬಿಟ್ಟಿರುವುದು ವಿವಾದದ ಕಿಡಿ ಹೊತ್ತಿಸಿದೆ. ದೋಸ್ತಾನಾ 2 ನಿರ್ಮಿಸುತ್ತಿರುವ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಸನ್ ಕಂಪನಿ, ವೃತ್ತಿಪರ ಬದ್ಧತೆಯ ಕೊರತೆಯಿಂದ ಕಾರ್ತಿಕ್ ಆರ್ಯನ್ ಅವರನ್ನು ದೋಸ್ತಾನಾ 2 ಚಿತ್ರದಿಂದ ಕೈ ಬಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿತ್ತು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಕಾರ್ತಿಕ್ ಆರ್ಯನನ್ನು ಕರಣ್ ಜೋಹರ್ ಹಾಗೂ ಸಂಗಡಿಗರು ಬಿಟ್ಟು ಬಿಡಬೇಕು. ಸುಶಾಂತ್ ಸಿಂಗ್ ರಜಪೂತ್ ರೀತಿ ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
ಕಾರ್ತಿಕ್ ತನ್ನ ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದಾನೆ. ಕಾರ್ತಿಕ್ ನೀನು ಚಿಲ್ಲರೆಗಳಿಗೆ ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಆಟಿಟ್ಯೂಡ್ನಿಂದ ಹೀಗಾಯಿತು ಎಂದು ನಿನ್ನ ವಿರುದ್ಧ ಈ ಮೂರ್ಖ (ಕರಣ್ ಜೋಹರ್) ಅಪಪ್ರಚಾರ ಎಬ್ಬಿಸುತ್ತಾನೆ. ನಂತರ ವೃತ್ತಿಪರತೆ ಕೊರತೆ ಹಾಗೂ ಡ್ರಗ್ಸ್ ಅಡಿಕ್ಸನ್ ಎಂದು ವದಂತಿ ಹಬ್ಬಿಸುತ್ತಾನೆ. ಸುಶಾಂತ್ ರೀತಿ ಸಾಯುವಂತೆ ಮಾಡುತ್ತಾನೆ. ಎಚ್ಚರವಾಗಿರುವ ಕಾರ್ತಿಕ್ ಎಂದು ಮತ್ತೊಂದು ಟ್ವೀಟ್ನಲ್ಲಿ ಕಾರ್ತಿಕ್ ಆರ್ಯನ್ಗೆ ಕಂಗನಾ ಸಲಹೆ ನೀಡಿದ್ದಾರೆ.
ಇನ್ನೊಂದೆಡೆ ನಿರ್ಮಾಪಕ ಕರಣ್ ಜೋಹರ್ ಅವರು ಇನ್ಸ್ಟಾಗ್ರಾಮ್ನಿಂದ ಕಾರ್ತಿಕ್ ಆರ್ಯನ್ ಅವರನ್ನು ಅನ್ಪಾಲೋವ್ ಮಾಡಿದ್ದಾರೆ. ತಮ್ಮ ಮುಂದಿನ ಸಿನಿಮಾಗಳಲ್ಲಿ ಇನ್ನೆಂದು ಕಾರ್ತಿಕ್ ಆರ್ಯನ್ ಗೆ ಕೆಲಸ ನೀಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಅಂದಹಾಗೇ ದೋಸ್ತಾನಾ 2ನಲ್ಲಿ ಜಾಹ್ನವಿ ಕಪೂರ್, ಲಕ್ಸ್ಯ್ ಲಲ್ವಾನಿ, ಆಶಾ ಭಟ್ ನಟಿಸುತ್ತಿದ್ದಾರೆ.