ಬೆಂಗಳೂರು: ದೇಶದ ಚಿತ್ರರಂಗದಲ್ಲೇ ಭಾರಿ ಸಂಚಲನವನ್ನು ಸೃಷ್ಟಿಸಿದ 'ಕಾಂತಾರ' ಸಿನಿಮಾ ಇಂದು ಓಟಿಟಿ ಪ್ಲಾಟ್ಫಾರ್ಮ್ ಅಮೇಜಾನ್ ಪ್ರೈಂನಲ್ಲಿ ಬಿಡಯಗೆಯಾಗಿದೆ.
ಇದನ್ನೂ ಓದಿ: ಘೋಸ್ಟ್ ಮೊದಲ ಹಂತದ ಚಿತ್ರೀಕರಣ ಪೂರ್ಣ
ಹೊಂಬಾಳೆ ಫಿಲ್ಮ್ ನಿರ್ಮಾಣದ ರಿಷಬ್ ಶೆಟ್ಟಿ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಕಾಂತಾರ' ಸಿನಿಮಾ ದೇಶ - ವಿದೇಶಗಳಲ್ಲೂ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿತ್ತು. ಇಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು 'ಕಾಂತಾರ'ವನ್ನು ಎರಡು ಮೂರು ಬಾರಿ ಥಿಯೇಟರ್ಗಳಲ್ಲಿ ನೋಡಿ ಕಣ್ಮುಂಬ್ತಿಕೊಂಡಿದ್ದರು. ಇದೀಗ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಗೆ ಮತ್ತಷ್ಟು ಖುಷಿಯನ್ನು ನೀಡಿದೆ.
ದೈವಾರಾಧನೆ, ಭೂತಕೋಲಗಳನ್ನೇ ಪ್ರಮುಖ ಕಥಾಹಂದರವಾಗಿ ಹೊಂದಿರುವ ‘ಕಾಂತಾರ’ ಸಿನಿಮಾದಲ್ಲಿ ಕಥಾನಾಯಕನೇ ದೈವನರ್ತಕ. ಇಂಥದ್ದೊಂದು ಕಥೆ ಹೊಂದಿರುವ 'ಕಾಂತಾರ' ಐಎಂಡಿಬಿಯಲ್ಲಿ 250 ಭಾರತೀಯ ಚಿತ್ರಗಳ ಪೈಕಿ ಮೊದಲ ಸ್ಥಾನ ಪಡೆದಿದ್ದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಹೆಗ್ಗಳಿಕೆಯ ಜತೆಗೆ ಹಲವು ಪ್ರಥಮಗಳಿಗೆ ನಾಂದಿ ಹಾಡಿದ ಖ್ಯಾತಿ ಈ ಚಿತ್ರಕ್ಕಿದೆ.
ಇನ್ನು, ಅನುಮತಿ ಇಲ್ಲದೆ 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿದ್ದ ಹಾಡಿನ ಟ್ಯೂನ್ ಬದಲಾಯಿಸಲಾಗಿದೆ.
ಇಂತಹ ಐತಿಹಾಸಿಕ ಸಿನಿಮಾ ಇಂದು ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದ್ದು, ಇದರಿಂದ ಜಗತ್ತಿನಾದ್ಯಂತ ಈ ಸಿನಿಮಾ ನೋಡಲು ಕಾತುರರಾಗಿದ್ದ ಜನರಿಗೆ ಸಂತಸಕೊಟ್ಟಿದೆ.
Kanta