ಮಂಡ್ಯ: ಕಲಾವಿದರ ಅಕಾಲಿಕ ಮರಣದಿಂದ ಕಂಗೆಟ್ಟಿರುವ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಕಿರುತೆರೆ ನಟ ಸುಶೀಲ್ ಗೌಡ (30) ಆತ್ಮಹತ್ಯಗೆ ಶರಣಾಗಿರುವ ಘಟನೆ ಮಂಡ್ಯದ ಇಂಡುವಾಳು ಗ್ರಾಮದಲ್ಲಿ ನಡೆದಿದೆ.
ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿರುವ ಸುಶೀಲ್, ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದರು. ಕಮರೊಟ್ಟು ಚೆಕ್ ಪೋಸ್ಟ್ ಸಿನಿಮಾಗಳಲ್ಲಿ ನಟಸಿದ್ದ ಸುಶೀಲ್, ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರ ಸಲಗದಲ್ಲಿಯೂ ನಟಿಸಿದ್ದಾರೆ.
ಕರೊನಾ ಲಾಕ್ಡೌನ್ನಿಂದಾಗಿ ಕಳೆದ ಮೂರು ತಿಂಗಳಿನಿಂದ ಜಿಮ್ ತೆರೆದಿರಲಿಲ್ಲ. ಈ ಒಂದು ನೋವು ಸುಶೀಲ್ಗೆ ಕಾಡುತ್ತಿತ್ತು ಎನ್ನಲಾಗಿದೆ. ಹೀಗಾಗಿ ಮೂರು ತಿಂಗಳಿಂದ ಮಂಡ್ಯಗೆ ಬಂದು ವಿವಿ ನಗರದ ತಮ್ಮದೇ ಮನೆಯಲ್ಲಿ ನೆಲೆಸಿದ್ದರು. ಇದರ ನಡುವೆ ಇಂಡುವಾಳು ಗ್ರಾಮದಲ್ಲಿರುವ ತನ್ನ ಸ್ನೇಹಿತನ ಮನೆಗೆ ತೆರಳಿದ್ದರು. ಸ್ನೇಹಿತನ ಮನೆಯ ಬಳಿ ಕೀ ಪಡೆದು ಹೋಗಿದ್ದರು. ಇದೀಗ ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆತ್ಮಹತ್ಯೆಗ ಕಾರಣವೇನು?
ಸದ್ಯಕ್ಕೆ ಕೇಳಿಬರುತ್ತಿರುವ ಮಾತೆಂದರೆ ನಟ ಸುಶೀಲ್ ಗೌಡ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣಿಗೆ ಶರಣಾಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ತನಿಖಾ ನಂತರವಷ್ಟೇ ಆತ್ಮಹತ್ಯೆಯ ಅಸಲಿ ಕಾರಣ ತಿಳಿದುಬರಲಿದೆ. (ದಿಗ್ವಿಜಯ ನ್ಯೂಸ್)