car 
ಸಿನಿವಾಣಿ

ನಟ ಸುದೀಪ್ ಸ್ಪೂರ್ತಿಯಿಂದ ಅಮೆರಿಕದಲ್ಲಿ ಕಾರ್ ನಂಬರ್ ಪ್ಲೇಟ್ ಮೇಲೆ ಕನ್ನಡ

ಬೆಂಗಳೂರು: ನಾಡು ತೊರೆದು ಹೋದರೂ, ನಾಡು, ನುಡಿಯನ್ನು ಕೆಲವರು ಮರೆಯುವುದಿಲ್ಲ. ಅದರಲ್ಲೂ ಕನ್ನಡಿಗರು ಈ ವಿಷಯದಲ್ಲಿ ಒಂದು ಕೈ ಮುಂದೆ.

ಇದೇ ರೀತಿ ಕನ್ನಡದ ವ್ಯಕ್ತಿಯೊಬ್ಬರು ನಟ ಸುದೀಪ್ ಅವರಿಂದ ಸ್ಪೂರ್ತಿ ಪಡೆದು ನ್ಯೂಯಾರ್ಕ್ ನಲ್ಲಿ ಕನ್ನಡ ಭಾಷಾಭಿಮಾನ ಮೆರೆದಿದ್ದಾರೆ.ವಿಕ್ರಾಂತ್ ರೋಣ ಸಿನಿಮಾ ಟೀಮ್ ಕಳೆದ ತಿಂಗಳು ಬುರ್ಜ್ ಖಲಿಫಾ ಮೇಲೆ ಮೊದಲು ಕನ್ನಡದ ಬಾವುಟ್ ಪ್ರದರ್ಶನ ಮಾಡಿದ್ದರು. ಈ ಘಟನೆಯಿಂದ ಸ್ಪೂರ್ತಿ ಪಡೆದು ನ್ಯೂಯಾರ್ಕ್​ನಲ್ಲಿ ನೆಲೆಸಿರುವ ಶಂಕರ್ ಎನ್ನುವರು ತಮ್ಮ ಕಾರ್ ಗೆ ಕನ್ನಡ ಎಂದು ನಾಮ ಫಲಕ ಹಾಕಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ನಂಬರ್ ಪ್ಲೆಟ್ ಬದಲಿಗೆ ತಮ್ಮ ಕಾರಿಗೆ ತಮ್ಮ ಇಷ್ಟದ ಹೆಸರನ್ನ ಇಡಬಹುದಾಗಿದೆ. ಶಂಕರ್ ಅವ್ರ ಭಾಷಾಭಿಮಾನಕ್ಕೆ ಕಿಚ್ಚ ಸುದೀಪ್ ಟ್ವಿಟ್ಟರ್​ನಲ್ಲಿ ಧನ್ಯವಾದ ತಿಳಿಸಿದ್ದಾರೆ.