ಸಿನಿವಾಣಿ

ಒಂದು ಕಾಲದಲ್ಲಿ ಕನ್ನಡದಲ್ಲಿ ಸ್ಟಾರ್ ಆಗಿ ಮೆರೆದ ಖ್ಯಾತ ನಟಿಯ ಪುತ್ರಿ ಈಕೆ! ಯಾರೆಂದು ಗುರುತಿಸುವಿರಾ? Kannada Actress

ಚೆನ್ನೈ: ನಟಿ ರಂಭಾ ( Actress Rambha ) ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಸ್ಟಾರ್​ ನಟಿಯ ಪಟ್ಟ ಪಡೆದವರು. ಕನ್ನಡ ( Kannada Actress ), ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಾಯಕ ನಟಿ ಮತ್ತು ಪೋಷಕ ನಟಿಯಾಗಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ನಟನಾ ವೃತ್ತಿಯನ್ನು ತ್ಯಜಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಪತಿ ಮತ್ತು ಮೂವರು ಮಕ್ಕಳೊಂದಿಗೆ ಕೆನಡಾದಲ್ಲಿ ನೆಲೆಸಿರುವ ರಂಭಾ, ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.

ಆದರೆ, ಇಂದಿಗೂ ರಂಭಾ ಅವರು ತಮ್ಮ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಂಭಾ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಅಪ್​ಲೋಡ್​ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೂ ರಂಭಾ ಉತ್ತರಿಸಿರುತ್ತಾರೆ.

ಇದೀಗ ರಂಭಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಸೆರೆಹಿಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಅದರಲ್ಲೂ ರಂಭಾ ಅವರ ಹಿರಿಯ ಪುತ್ರಿ ಲಾನ್ಯಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಲಾನ್ಯಾ ಸೌಂದರ್ಯಕ್ಕೆ ಫಿದಾ ಆಗಿರುವ ನೆಟ್ಟಿಗರು, ಸಿನಿಮಾರಂಗಕ್ಕೆ ಮತ್ತೊಬ್ಬ ನಾಯಕಿ ಸಿಕ್ಕಳು ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ರಂಭಾ ಅವರಿಗೆ ಇಷ್ಟು ದೊಡ್ಡ ಮಗಳಿದ್ದಾಳಾ? ತಾಯಿಯೇ ಇನ್ನೂ ಯುವತಿಯಂತೆ ಕಾಣುತ್ತಿದ್ದಾರೆ. ಶೀಘ್ರದಲ್ಲೇ ರಂಭಾ ಪುತ್ರಿ ನಾಯಕಿಯಾಗಿ ಸಿನಿಮಾಗೆ ಎಂಟ್ರಿ ಕೊಡುವುಡು ಫಿಕ್ಸ್. ಯಾರಾದರೂ ನಿರ್ಮಾಪಕರು ಅಥವಾ ನಿರ್ದೇಶಕರು ರಂಭಾ ಪುತ್ರಿಯನ್ನು ಸಂಪರ್ಕಿಸಲಿದ್ದಾರೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)