ಸಿನಿವಾಣಿ

PHOTOS| ಗುಲಾಬಿ ಬಣ್ಣದ ಸೀರೆಯಲ್ಲಿ ಮಾದಕ ನೋಟ ಬೀರಿದ ದಿಯಾ ಖ್ಯಾತಿಯ ಖುಷಿ ರವಿ!

ಬೆಂಗಳೂರು: ದಿ ಗ್ರೇಟ್​ ಸ್ಟೋರಿ ಆಫ್​ ಸೊಡಾಬುಡ್ಡಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ನಟಿ ಖುಷಿ ರವಿ, ದಿಯಾ ಸಿನಿಮಾ ಬಿಡುಗಡೆಯಾಗುವ ಮುನ್ನ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಈಗ ಖುಷಿ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ನಟಿ.

ಖುಷಿ ರವಿ ಅವರ ಮೂಲ ಹೆಸರು ಸುಷ್ಮಿತಾ ರವಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಖುಷಿ ಎಸ್​ಎಸ್​ಎಂಆರ್​ವಿ ಕಾಲೇಜಿನಲ್ಲಿ ಪದವಿ ಪಡೆದರು. ದಿಯಾ ಯಶಸ್ಸಿನ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸ್ಪೂಕಿ ಕಾಲೇಜ್​​​ ಹಾಗೂ ಕೇಸ್​ ಆಫ್​ ಕೊಂಡಾನ ಸಿನಿಮಾದಲ್ಲಿ ನಟಿಸಿದ್ದಾರೆ. ಮುಂಬರುವ ಫುಲ್​ ಮೀಲ್ಸ್​ ಮತ್ತು ಸನ್​ ಆಫ್​ ಮುತ್ತಣ್ಣ ಚಿತ್ರಗಳಿಗೂ ಖುಷಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪಿಂಡಂ ಹೆಸರಿನ ತೆಲುಗು ಸಿನಿಮಾದಲ್ಲೂ ಅಭಿನಯಿಸಿದ್ದು, ತಮ್ಮ ನಟನೆಯಿಂದಲೇ ಖುಷಿ ರವಿ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಸಿನಿಮಾ ಮಾತ್ರವಲ್ಲದೆ, ಜಾತ್ರೆ, ಈಕ್ಷಣ, ಸಂಗಮ ಸಂಗಮ ಮತ್ತು ಎವೆರಿಥಿಂಗ್​ ಇಸ್​ ಪಾಸಿಬಲ್​ ಹೆಸರಿನ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ.

ಸಿನಿಮಾ ಹೊರತಾಗಿ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಖುಷಿ, ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ರಾಕೇಶ್​ ಕುಮಾರ್​ ಎಂಬುವರನ್ನು ಮದುವೆಯಾಗಿದ್ದು, ಓರ್ಬ ಮಗಳಿದ್ದಾಳೆ. ಕುಟುಂಬದ ಜತೆಗಿನ ಮಧುರ ಕ್ಷಣಗಳನ್ನು ಸಹ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳಿಗೆ ತಮ್ಮ ಸಿನಿಮಾಗಳ ಬಗ್ಗೆ ಆಗಾಗ ಅಪ್​ಡೇಟ್​ಗಳನ್ನು ನೀಡುವ ಮೂಲಕ ಸಂಪರ್ಕದಲ್ಲಿರುತ್ತಾರೆ.

ಇದೀಗ ಖುಷಿ ಅವರು ತಮ್ಮ ತಿಳಿ ಗುಲಾಬಿ ಬಣ್ಣದ ಸೀರೆ ಮತ್ತು ಹಸಿರು ಬಣ್ಣದ ರವಿಕೆ ತೊಟ್ಟು ಮಾದಕವಾಗಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಅದರಲ್ಲೂ ಪೂರ್ತಿ ಬೆನ್ನು ಕಾಣುವಂತೆ ಖುಷಿ ಪೋಸ್​ ನೀಡಿರುವ ಫೋಟೋಗಳು ಪಡ್ಡೆ ಹುಡುಗರ ಮೈ ಬಿಸಿ ಏರಿಸಿದೆ. ಖುಷಿ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್ ಮಾಡುವ ಮೂಲಕ ಸೌಂದರ್ಯವನ್ನು ಹೊಗಳುತ್ತಿದ್ದಾರೆ.