ಸಿನಿವಾಣಿ

ಪ್ರಾಣಕ್ಕಿಂತ ಕೊಟ್ಟ ಮಾತು ದೊಡ್ಡದು ... ಕಂಗನಾ ಹೀಗೆ ಹೇಳಿದ್ದು ಯಾಕೆ?

manjunathktgns

ಮುಂಬೈ: ಸ್ವರ ಭಾಸ್ಕರ್​ ಸೇರಿದಂತೆ ಹಲವರು ತಮ್ಮ ವಿರುದ್ಧ ನಡೆಸಿರುತ್ತಿರುವ 'ಕಂಗನಾ ಅವಾರ್ಡ್​ ವಾಪಸ್​ ಕರ್​ ...' ಅಭಿಯಾನದ ಕುರಿತು ಮಾತನಾಡಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​, ತಮ್ಮ ಮಾತು ಸುಳ್ಳಾದರ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಕೊಡುತ್ತೇನೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅವರ ಪರವಾಗಿ ಗಟ್ಟಿಯಾಗಿ ನಿಂತವರು ಕಂಗನಾ ರಣಾವತ್​. ಸುಶಾಂತ್​ ಅತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ಕೊಲಲ್ಲಾಗಿದೆ ಎಂಬರ್ಥದಲ್ಲಿ ಅವರು ಮಾತನಾಡಿದ್ದರು. ಅಷ್ಟೇ ಅಲ್ಲ, ಒಂದು ಪಕ್ಷ ತಮ್ಮ ಮಾತು ಸುಳ್ಳಾದರೆ, ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಕೊಡುವುದಾಗಿ ಹೇಳಿದ್ದರು.

ಆದರೆ, ಇದೀಗ ಪ್ರಕರಣ ಇನ್ನೊಂದು ತಿರುವು ಪಡೆದಿದೆ. ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ, ಸುಶಾಂತ್​ ಕೊಲೆಯಾಗಿದ್ದಿಕ್ಕೆ ಯಾವುದೇ ಪುರಾವೆಗಳು ಸಿಗುತ್ತಿಲ್ಲ ಎಂದು ಹೇಳಿದೆ. ಇದಕ್ಕೆ ಪೂರಕವಾಗಿ, ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಂಟಲ್​ ಸೈನ್ಸಸ್​ (ಏಮ್ಸ್​)ನ ವೈದ್ಯರು ಸಹ ಸುಶಾಂತ್​ ಅವರನ್ನು ಕೊಲ್ಲಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ. ಇನ್ನು ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಿಯಾ ಚಕ್ರವರ್ತಿಗೆ, ಮುಂಬೈ ಹೈಕೋರ್ಟ್​ ಬೇಲ್​ ನೀಡಿದೆ.

ಇದೆಲ್ಲದರ ಹಿನ್ನೆಲೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಕಂಗನಾ ಅವಾರ್ಡ್​ ವಾಪಸ್​ ಕರ್​ ಎಂಬ ಅಭಿಯಾನ ಶುರುವಾಗಿದೆ. ಕಂಗನಾ ಅವರ ಹೆಸರನ್ನು ಹೇಳದೆಯೇ ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಸ್ವರಾ ಬಾಸ್ಕರ್​, 'ನ್ಯಾಯಾಲಯಕ್ಕೆ ಧನ್ಯವಾದಗಳು. ಹಾಗೆಯೇ ಸಿಬಿಐ ಮತ್ತು ಏಮ್ಸ್​ ಸಹ ಸುಶಾಂತ್​ ಸತ್ತಿದ್ದು ಆತ್ಮಹತ್ಯೆಯಿಂದ ಎಂದು ಹೇಳಿವೆ. ಅದು ಕೊಲೆ ಎಂದು ಪ್ರತಿಪಾದಿಸುತ್ತಿದ್ದ ಕೆಲವರು, ತಮ್ಮ ಮಾತು ಸುಳ್ಳಾದರೆ ಪ್ರಶಸ್ತಿ ವಾಪಸ್ಸು ಮಾಡುವುದಾಗಿ ಹೇಳಿದ್ದರು. ಈಗ ಏನು ಹೇಳುತ್ತಾರೋ?' ಎಂದು ಕಾಲೆಳೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, 'ನಾನು ಶ್ರೀರಾಮನ ಭಕ್ತೆ. ಕೊಟ್ಟ ಮಾತು ಜೀವಕ್ಕಿಂತ ದೊಡ್ಡದು ಎಂದು ನಂಬಿದವಳು. ಹಾಗಾಗಿ ಕೊಟ್ಟ ಮಾತನ್ನು ಮರೆಯುವ ಮಾತೇ ಇಲ್ಲ. ನನ್ನ ಮಾತು ಸುಳ್ಳಾದರೆ, ಪ್ರಶಸ್ತಿ ವಾಪಸ್ಸು ಮಾಡುತ್ತೇನೆ' ಎಂದು ಪುನರುಚ್ಛರಿಸಿದ್ದಾರೆ.