ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮಹಾರಾಷ್ಟ್ರ ಸರ್ಕಾರದ ಬಗ್ಗೆ ಮತ್ತೆ ಗುಡುಗಿದ್ದಾರೆ. ಅತಿಕ್ರಮ ಆರೋಪದಡಿ ಮುಂಬೈ ಪಾಲಿಕೆ ಕಂಗನಾ ಅವರ ಮನೆಯನ್ನು ಒಡೆದುಹಾಕಿತ್ತು. ಈಗ ಅದೇ ವಿಚಾರದ ಬಗ್ಗೆ ಕಂಗನಾ ಮರು ಮಾತನಾಡಿದ್ದಾರೆ.
ಇದನ್ನೂ ಓದಿ: ಕರಣ್, ಕಂಗನಾ ಮತ್ತು ಕಸ!
ಹೌದು, ಮುಂಬೈನ ಬಾಂದ್ರಾದಲ್ಲಿನ ಕಂಗನಾ ಮನೆಯನ್ನು ಅತಿಕ್ರಮ ಆರೋಪದಡಿ ಒಡೆದುಹಾಕಲಿ ಮುಂಬೈ ಪಾಲಿಕೆ ಬರೋಬ್ಬರಿ 82 ಲಕ್ಷ ರೂ ಖರ್ಚು ಮಾಡಿದೆ. ಈ ವಿಚಾರವನ್ನು ತಿಳಿದ ಕಂಗನಾ, ಪಾಲಿಕೆ ಮತ್ತು ಉದ್ಧವ್ ಠಾಕ್ರೆ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.
‘ನನ್ನ ಮನೆಯನ್ನು ಅತಿಕ್ರಮ ಎಂದು ಸಾಬೀತು ಮಾಡಿ, ಕೆಡವಿ ಹಾಕಲು ಮುಂಬೈ ಪಾಲಿಕೆ ವಕೀಲರಿಗೆ ಬರೋಬ್ಬರಿ 82 ಲಕ್ಷ ಮೊತ್ತ ನೀಡಿದೆ. ಹೆಣ್ಣು ಹುಡುಗಿಯನ್ನು ಎದುರಿಸಲು 82 ಲಕ್ಷ ಸಾರ್ವಜನಿಕರ ಹಣವನ್ನು ಪಪ್ಪು ಗ್ಯಾಂಗ್ ಹಾಳು ಮಾಡಿದೆ’ ಎಂದಿದ್ದಾರೆ.
ಇದನ್ನೂ ಓದಿ: ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್
ಅಂದಹಾಗೆ, ಕಂಗನಾರ ಬಾಂದ್ರಾ ಮನೆಯನ್ನು ಕೆಡವಲು ಹಿರಿಯ ವಕೀಲ ಆಸ್ಪಿ ಚಿನೋಯ್ಗೆ ಫೀಸ್ ರೂಪದಲ್ಲಿ 82 ಲಕ್ಷ ವ್ಯಯಿಸಿದೆ. ಸೆ. 22ರಂದು 22.50 ಲಕ್ಷ ಮತ್ತು ಅ.7 ರಂದು 60 ಲಕ್ಷ ಸೇರಿ ಒಟ್ಟಾರೆ 82.50 ಲಕ್ಷ ಮೊತ್ತವನ್ನು ಬಿಎಂಸಿ ವಕೀಲರಿಗೆ ನೀಡಿದೆ. (ಏಜೆನ್ಸೀಸ್)