ನಟಿ ಕಂಗನಾ ರಣಾವತ್ ಸದ್ಯ ಬಾಲಿವುಡ್ನಲ್ಲಿ ನಡೆಯುತ್ತಿರುವ ನೆಪೋಟಿಸಂ ಚರ್ಚೆಯಲ್ಲಿ ಸಕ್ರಿಯರಾಗಿದ್ದಾರೆ. ಮಹೇಶ್ ಭಟ್ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಂದಾದ ಮೇಲೊಂದರಂತೆ ಕಮೆಂಟ್ ಮಾಡುತ್ತ ಪೂಜಾ ಭಟ್ ಮತ್ತು ಆಲಿಯಾ ಭಟ್ ಅವರನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಗದ್ದಲ ಗಲಾಟೆಯ ನಡೆವೆಯೂ ಕಂಗನಾ ರಣಾವತ್ ಇದೀಗ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ …
ಹೌದು, ಕಂಗನಾ ರಣಾವತ್ ಅವರನ್ನೇ ಹೋಲುವ ಗೊಂಬೆಯೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಆಗಿದ್ದು, ಮಣಿಕರ್ಣಿಕಾ ಚಿತ್ರದಲ್ಲಿನ ಕಂಗನಾ ಅವತಾರದಲ್ಲಿ ಗೊಂಬೆ ತಯಾರಾಗಿದೆ. ಆ ಫೋಟೋವನ್ನು ಸ್ವತಃ ಕಂಗನಾ ಟೀಮ್ ಟ್ವಿಟ್ ಮಾಡಿಕೊಂಡು ಅದಕ್ಕೊಂದು ಒಳ್ಳೇ ಕ್ಯಾಪ್ಶನ್ ಸಹ ನೀಡಿ ಪೋಸ್ಟ್ ಮಾಡಿದೆ. ‘ಮಣಿಕರ್ಣಿಕಾ ಗೊಂಬೆಗಳು ಮಕ್ಕಳಿಗೆ ತುಂಬ ಪ್ರಿಯವಾಗುತ್ತಿವೆ. ನಿಜಕ್ಕೂ ಇದು ಖುಷಿ ವಿಚಾರ. ಪುಟ್ಟ ಮಕ್ಕಳು ಸ್ವತಂತ್ರ ಹೋರಾಟಗಾರರನ್ನು ನೋಡಿಕೊಂಡು ಬೆಳೆಯಬೇಕು. ಅದು ದೇಶಭಕ್ತಿ ಮತ್ತು ಶೌರ್ಯದ ಪ್ರತೀಕ ಮತ್ತು ಸ್ಫೂರ್ತಿ ಎಂದು ಟ್ವಿಟ್ ಮಾಡಲಾಗಿದೆ.
ಇದನ್ನೂ ಓದಿ: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್
ಕಂಗನಾ ತೊಟ್ಟ ಸೀರೆಯನ್ನೇ ಹೋಲುವ ಮತ್ತು ಮೈ ಮೇಲಿನ ಒಡವೆಗಳನ್ನೇ ಹೋಲುವ ಪುಟಾಣಿ ಒಡೆವೆ ಸಿದ್ಧಪಡಿಸಿ ಗೊಂಬೆ ತಯಾರಿಸಲಾಗಿದೆ. ಅಂದಹಾಗೆ, ಈ ಹಿಂದೆ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂರ್ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಗಳಿಸಿತ್ತು. ತೈಮೂರ್ನನ್ನೇ ಹೋಲುವ ಗೊಂಬೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಕಂಗನಾ ಗೊಂಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. (ಏಜೆನ್ಸೀಸ್)