ಸಿನಿವಾಣಿ

ಆ್ಯಕ್ಷನ್​ ಸಿನಿಮಾ 'ಧಾಕಡ್​'ಗೆ ಕಂಗನಾ ಹೇಗೆ ರೆಡಿಯಾಗ್ತಿದ್ದಾರೆ ನೋಡಿ!

ನಟಿ ಕಂಗನಾ ರಣಾವತ್​ ಸದ್ಯ ಬಾಲಿವುಡ್​ನಲ್ಲಿ ನಡೆಯುತ್ತಿರುವ ನೆಪೋಟಿಸಂ ಚರ್ಚೆಯಲ್ಲಿ ಸಕ್ರಿಯರಾಗಿದ್ದಾರೆ. ಮಹೇಶ್​ ಭಟ್​ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಂದಾದ ಮೇಲೊಂದರಂತೆ ಕಮೆಂಟ್​ ಮಾಡುತ್ತ ಪೂಜಾ ಭಟ್​ ಮತ್ತು ಆಲಿಯಾ ಭಟ್​ ಅವರನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಗದ್ದಲ ಗಲಾಟೆಯ ನಡೆವೆಯೂ ಕಂಗನಾ ರಣಾವತ್​ ಇದೀಗ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಹೌದು, ಕರಿಯರ್​ನತ್ತಲೂ ಇದೀಗ ಮತ್ತೆ ಗಮನ ಹರಿಸಿದ್ದಾರೆ. ಸಿನಿಮಾಗಳ ಕಥೆ ಕೇಳುತ್ತಿದ್ದಾರೆ. ಸದ್ದಿಲ್ಲದೆ ಒಪ್ಪಿಕೊಂಡಿರುವ ಆ್ಯಕ್ಷನ್​ ಸಿನಿಮಾ ‘ಧಾಕಡ್​’ಗೆ ತಯಾರಿ ನಡೆಸಿದ್ದಾರೆ. ಮನೆಯಲ್ಲಿ ಆನ್​ಲೈನ್​ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶಕರು ಮತ್ತು ಬರಹಗಾರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.

ಈಗಾಗಲೇ ನೋಡಿರುವಂತೆ ಧಾಕಡ್​ ಚಿತ್ರದ ಟೀಸರ್​ನಲ್ಲಿ ಕಂಗನಾ ರಗಡ್​ ಆಗಿ ಕಾಣಿಸಿದ್ದಾರೆ. ಕೈಯಲ್ಲಿ ಗನ್​ ಹಿಡಿದು ಗುಂಡಿನ ಮಳೆ ಸುರಿಸಿದ್ದಾರೆ. ಹನುಕುವ ರಕ್ತವನ್ನೇ ರುಚಿಸುವ ಕಂಗನಾ, ಈ ಹಿಂದೆಂದೂ ಇಂಥ ಅವತಾರದಲ್ಲಿ ಕಾಣಿಸಿರಲಿಲ್ಲ. ಇದೀಗ ಅಂಥ ಒಂದು ಆ್ಯಕ್ಷನ್​ ಅವತಾರದ ಪಾತ್ರವನ್ನು ನಿಭಾಯಿಸಲು ತಯಾರಿ ನಡೆಸಿದ್ದು, ಕಥೆಯನ್ನು ಅಂತಿಮ ಮಾಡಲಾಗುವ ಪ್ರಕ್ರಿಯೆ ನಡೆಯುತ್ತಿದೆ.

ನಿರ್ದೇಶಕ ರಜನೀಶ್ ಘಾಯ್​, ಸಂಭಾಷಣೆಕಾರ ರಿತೇಶ್​ ಶಾ ಮತ್ತು ನಿರ್ಮಾಪಕ ಸೋಹೈಲ್​ ಜತೆ ಸೇರಿ ಚರ್ಚೆ ನಡೆಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಶೀಘ್ರದಲ್ಲಿ ಚಿತ್ರದ ಶೂಟಿಂಗ್​ಗೆ ಚಾಲನೆ ಕೊಡುವ ಸಾಧ್ಯತೆ ಇದೆ. (ಏಜೆನ್ಸೀಸ್​)