ಸಿನಿವಾಣಿ

'ಕಲ್ಕಿ 2898 AD' ಸಿನಿಮಾದ ಭೈರವ ಗೀತೆ ವೀಡಿಯೋ ಔಟ್​​; 'ಪಂಜಾಬಿ ಆಗಯೇ ಓಯೇ' ಎಂದ ಅಭಿಮಾನಿಗಳು

ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 AD'ಯ 'ಭೈರವ ಗೀತೆ' ಹಾಡು ಬಿಡುಗಡೆಯಾಗಿದೆ. ಇದಕ್ಕೆ ಖ್ಯಾತ ಪಂಜಾಬಿ ಮತ್ತು ಬಾಲಿವುಡ್ ಗಾಯಕ ದಿಲ್ಜಿತ್ ದೋಸಾಂಜ್ ಧ್ವನಿ ನೀಡಿದ್ದಾರೆ. ಈ ಹಾಡನ್ನು ಹಿಂದಿ ಮಾತ್ರವಲ್ಲದೆ ದಿಲ್ಜಿತ್ ದೋಸಾಂಜ್ ಅವರು ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಹಾಡಿದ್ದಾರೆ.

ಕುಮಾರ್ ಅವರ ಭೈರವ ಗೀತರಚನೆಗೆ ಸಂತೋಷ್ ನಾರಾಯಣನ್ ಸಂಯೋಜನೆ ಇದೆ. ಹಾಡಿನಲ್ಲಿ ಪ್ರಭಾಸ್​ ಮತ್ತು ದಿಲ್ಜಿತ್​​ ಇಬ್ಬರೂ ಕಪ್ಪು ಕುರ್ತಾ, ಕಪ್ಪು ಧೋತಿ ಮತ್ತು ಕಪ್ಪು ಪೇಟವನ್ನು ಒಳಗೊಂಡಿರುವ ಕಪ್ಪು ಪಂಜಾಬಿ ಸ್ಟೈಲ್​ನ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್​ ಮತ್ತು ದಿಲ್ಜಿತ್​​ ದೋಸಾಂಜ್​​ ತೆರೆಹಂಚಿಕೊಂಡಿರುವ ಈ ಹಾಡನ್ನು ಅಭಿಮಾನಿಗಳು ಮೆಚ್ಚಿ ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ಕಾಮೆಂಟ್​ಗಳು ಬಂದಿದ್ದು, ಅದರಲ್ಲಿ ವರ್ಷದ ಬ್ಲಾಕ್​ಬಸ್ಟರ್​ ಹಿಟ್​​ ಸಾಂಗ್​ ಎಂದು ಒಬ್ಬರು, ಮತ್ತೊಬ್ಬರು ಪಂಜಾಬಿ ಆಗಯೇ ಓಯೇ ಎಂದು ಬರೆದಿದ್ದಾರೆ.

ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಚಿತ್ರದಲ್ಲಿ ಕಮಲ್ ಹಾಸನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ನಿರೀಕ್ಷೆಯನ್ನು ಹೆಚ್ಚಿಸಿದೆ. ಟ್ರೈಲರ್​ನಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಅವರ ನೋಟವು ಅಭಿಮಾನಿಗಳನ್ನು ಮೆಚ್ಚಿಸಿದೆ. ಬಾಲಿವುಡ್ ನಟಿ ದಿಶಾ ಪಟಾನಿ ಕೂಡ ಚಿತ್ರದ ಭಾಗವಾಗಿದ್ದಾರೆ. ನಾಗ್ ಅಶ್ವಿನ್ ಆ್ಯಕ್ಷನ್​-ಕಟ್​​ ಹೇಳಿರುವ ಈ ಸಿನಿಮಾ ಜೂನ್ 27 ರಂದು ತೆರೆಕಾಣಲಿದೆ. (ಏಜೆನ್ಸೀಸ್​​)