ಸಿನಿವಾಣಿ

ಕಾಜೋಲ್​​ ಮಗಳ ಈ ಫೋಟೋಕ್ಕೆ ಮಾರು ಹೋಗದವರೇ ಇಲ್ಲ: ಅಂದು ಟ್ರೋಲ್​ ಆಗಿದ್ದವಳೀಗ ಎಲ್ಲರ ಫೇವರೆಟ್

ಮುಂಬೈ: ಸ್ಟಾರ್​ ನಟ ನಟಿಯರ ಮಕ್ಕಳ ಮೇಲೆ ಸಾಮಾನ್ಯವಾಗಿ ಹೆಚ್ಚಿನ ಗಮನವಿರುತ್ತದೆ. ನಟ ನಟಿಯರಂತೆ ಅವರ ಮಕ್ಕಳು ಸಹ ಏನೇ ಮಾಡಿದರೂ ಅದು ದೊಡ್ಡ ಸುದ್ದಿಯಾಗಿಬಿಡುತ್ತದೆ. ಬಾಲಿವುಡ್​ ನಟಿ ಕಾಜೋಲ್ ದೇವ್ಗನ್​​ ಮಗಳು ನೈಸಾ ಕೂಡ ಇತ್ತೀಚೆಗ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಅದೀಗ ಸುದ್ದಿಯಲ್ಲಿದೆ.

16 ವರ್ಷ ವಯಸ್ಸಿನ ನೈಸಾ ಇತ್ತೀಚೆಗೆ ಫೋಟೋಶೂಟ್ ​ ಒಂದನ್ನು ಮಾಡಿಸಿಕೊಂಡಿದ್ದಾಳೆ. ಕ್ರೀಂ ಬಣ್ಣದ ಲೆಹಂಗಾ ತೊಟ್ಟು ಟ್ರೆಡಿಷನಲ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ನೈಸಾಳ ಫೋಟೋವನ್ನು ತಾಯಿ ಕಾಜೋಲ್ ​ ತನ್ನ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಮಗಳಿಗೆ ಇನ್ನೂ ಹೆಚ್ಚು ನಗುವಂತೆ ತಿಳಿಸಿದ್ದಾರೆ.

ನೈಸಾ ಕುರಿತಾಗಿ ಇತ್ತೀಚೆಗೆ ಒಂದಿಷ್ಟು ಟ್ರೋಲಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದರು. ತಾಯಿಗಿಂತ ಕೊಂಚ ಕಪ್ಪಿರುವ ಆಕೆಗೆ ಸ್ಕಿನ್​ ಸರ್ಜರಿ ಮಾಡಿಸಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿದ್ದರು. ಅದರಿಂದಾಗಿ ಸಿಟ್ಟಿಗೆದ್ದ ನಟಿ, ಟ್ರೋಲಿಗರಿಗೆ ಕ್ಲಾಸ್​ ತೆಗೆದುಕೊಂಡಿದ್ದರು. ನನ್ನ ಪುಣ್ಯ ಟ್ರೋಲ್​ ಆಗುವ ಸಮಯದಲ್ಲಿ ನನ್ನ ಮಗಳು ಭಾರತದಲ್ಲಿರಲಿಲ್ಲ, ಸಿಂಗಾಪುರದಲ್ಲಿದ್ದಳು. ಎಲ್ಲಿದ್ದರೂ ಸೋಶಿಯಲ್​ ಮೀಡಿಯಾ ಮೂಲಕ ಎಲ್ಲೆಡೆ ವಿಚಾರ ತಲುಪುತ್ತದೆ. ನಾನು ನನ್ನ ಮಗನಿಗೆ ಹೆಣ್ಣು ಮಕ್ಕಳಿಗೆ ಹೇಗೆ ಗೌರವ ಕೊಡಬೇಕು ಎಂದು ಹೇಳಿಕೊಡುತ್ತೇನೆಯೋ ಹಾಗೆಯೇ ನನ್ನ ಮಗಳಿಗೆ ಸ್ವಯಂ ಗೌರವವನ್ನು ನೀಡಿಕೊಳ್ಳುವುದನ್ನೂ ಸಹ ಹೇಳಿಕೊಡುತ್ತೇನೆ" ಎಂದು ಹೇಳಿ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.

ಅದಾದ ನಂತರ ಇದೇ ಮೊದಲನೇ ಬಾರಿಗೆ ತಮ್ಮ ಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಜೋಲ್ ಮಾತನಾಡಿದ್ದಾರೆ. ಭಯದ ಸಮಯದಲ್ಲಿ ನಾವು ಇದ್ದೇವೆ, ಈಗ ನಮಗೆಲ್ಲರಿಗೂ ಸಂತೋಷದ ಮಾತ್ರೆ ಬೇಕಿದೆ. ನೀನು ನನ್ನವಳಾಗಿದ್ದಕ್ಕೆ ಧನ್ಯವಾದಗಳು ಎಂದು ಮಗಳಿಗೆ ಧನ್ಯವಾದ ತಿಳಿಸಿದ್ದಾರೆ.ಕಾಜೋಲ್ ಅವರ ಈ ಪೋಸ್ಟ್​ಗೆ ಆಕೆಯ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಲಕ್ಷಾಂತರ ಲೈಕ್ಸ್​ ಮತ್ತು ಸಾವಿರಾರು ಕಾಮೆಂಟ್​ಗಳು ಹರಿಸುಬಂದಿವೆ. (ಏಜೆನ್ಸೀಸ್​)