ತಾತನ ಸಮಾಧಿಗೆ ಭೇಟಿ ನೀಡಿದ ಮೊಮ್ಮಗ ಜೂನಿಯರ್​ ಎನ್​ಟಿಆರ್​ 
ಸಿನಿವಾಣಿ

NTR 103ನೇ ಜನ್ಮದಿನ: ಅಜ್ಜನ ನೆನೆದು ಭಾವುಕರಾದ ಜೂನಿಯರ್ ಎನ್‌ಟಿಆರ್;ಮಾಜಿ ಸಿಎಂಗೆ ಪ್ರಧಾನಿ ನಮನ! JrNTR on SrNTR

ಪ್ರಮುಖ ಮುಖ್ಯಾಂಶಗಳು

  • ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್​ಟಿಆರ್​ 103 ನೇ ಹುಟ್ಟಿನ ಹಬ್ಬ
  • ತಾತನ ಸಮಾಧಿಗೆ ಭೇಟಿ ನೀಡಿದ ಮೊಮ್ಮಗ ಜೂನಿಯರ್​ ಎನ್​ಟಿಆರ್​
  • ಮಾಜಿ ಸಿಎಂಗೆ ಶುಭಕೋರಿದ ಪಿಎಂ ನರೇಂದ್ರ ಮೋದಿ
ಆಂಧ್ರಪ್ರದೇಶ: ಇಂದು (ಗುರುವಾರ, ಮೇ.28) ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲಗು ಸಿನಿಮಾರಂಗದ ಮೇರು ನಟ ದಿವಂಗತ ಎನ್​.ಟಿ. ರಾಮ್​ರಾವ್​ ಅವರ 103 ನೇ ಹುಟ್ಟುಹಬ್ಬವಾಗಿದ್ದು, ಹೈದರಾಬಾದ್​ನಲ್ಲಿರುವ ಎನ್​.ಟಿ.ಆರ್​ ಘಾಟ್​ಗೆ ಮೊಮ್ಮಗ ಜೂನಿಯರ್​ ಎನ್​.ಟಿ.ಆರ್ (JrNTR on SrNTR) ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ನಮ್ಮ ಭದ್ರತಾ ಸಿಬ್ಬಂದಿಗಳೊಂದಿಗೆ ಎನ್​ಟಿಆರ್​ ಘಾಟ್​ಗೆ ಬಂದಿಳಿದ ಜೂನಿಯರ್ ಎನ್​ಟಿಆರ್​ ಅಜ್ಜನ ಸಮಾಧಿ ಬಳಿ ಭಾವುಕರಾಗಿ ಕಂಡುಬಂದಿದ್ದು, ಹೂವನ್ನು ಸಮಾಧಿ ಮೇಲೆ ಇಡುವ ಮೂಲಕ ಗೌರವ ಸಲ್ಲಿಸಿದರು.

ತಾತನ ಬಗ್ಗೆ ಮೊಮ್ಮಗನ ಭಾವನಾತ್ಮಕ ಪೋಸ್ಟ್​!

ಅವಿಭಜಿತ ಆಂಧ್ರದ ಮಾಜಿ ಸಿಎಂ ಹಾಗೂ ತೆಲಗು ಸಿನಿಮಾರಂಗದ ಖ್ಯಾತ ನಟರಾಗಿದ್ದ ನಂದಮೂರಿ ತಾರಕ್​ರಾಮರಾವ್ ಅಲಿಯಾಸ್​ ಎನ್​ಟಿಆರ್​ ಅವರ ಕುರಿತು ಮೊಮ್ಮಗ ಜೂನಿಯರ್​ ಎನ್​ಟಿಆರ್​ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತೆಲಗು ಚಿತ್ರರಂಗ ಹಾಗೂ ಆಂಧ್ರಪ್ರದೇಶದಲ್ಲಿ ಎನ್​ಟಿಆರ್​ ಅವರು ಭೀರಿದ ಪ್ರಭಾವ ಹಾಗೂ ಪ್ರೇರಣೆ ಅಧ್ವಿತಿಯವಾದದ್ದು, ಚಿತ್ರರಂಗದಲ್ಲಿ ಅವರನ್ನು ದಂತಕಥೆಯಂತೆ ಪ್ರತಿಬಿಂಬಿಸಲಾಗುತ್ತದೆ ಇದಕ್ಕೆಲ್ಲಾ ನಾನು ನಿಮಗೆ ಕೃತಜ್ಞನಾಗಿದ್ದೆನೆಂದು ಅವರು ಬೆಡದುಕೊಂಡಿದ್ದಾರೆ.
ಸಿನಿಮಾ ಅಷ್ಟೇ ಅಲ್ಲದೆ ಸಿಎಂ ಆಗಿ ಅವರು ಜಾರಿಗೆ ತಂದ ಜನಪರ ಯೋಜನೆಗಳು, ಸಾರ್ವಜನಿಕರ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ಜನ ಇಂದಿಗೂ ಮರೆತಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿದ್ದ ಎನ್​ಟಿಆರ್​ ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಹಾಗೆಯೇ ಆಂಧ್ರದ ಈಗೀನ ರಾಜಕೀಯ ನಿಮ್ಮ ಆದರ್ಶದಂತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಎನ್​ಟಿಆರ್​ಗೆ ಮೋದಿ ನಮನ!

ಆಂಧ್ರದ ರಾಜಕೀಯದ ಅಚ್ಚಳಿಯದ ಹೆಸರಾಗಿರುವ ಎನ್​ಟಿಆರ್​ ಅವರಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದಂದು ಅವರನ್ನು ನೆನಪಿಸಿಕೊಂಡಿದ್ದಾರೆ.
ಸಿನಿಮಾ ಹಾಗೂ ರಾಜಕೀಯದಲ್ಲಿ ತಮ್ಮನ್ನು ಗುರುತಿಸಿಕೊಂಡ ಎನ್​ಟಿಆರ್​ ಅವರಿಗೆ ಹುಟ್ಟಿನ ದಿನದ ಶುಭಾಷಯಗಳು. ಎನ್​ಟಿಆರ್ ಬಡವರ ಘನತೆ ಹೆಚ್ಚಿಸುವ ಸಮಾಜ ಕಲ್ಯಾಣ ಯೋಜನೆಯ ಮೂಲಕ ಮನೆಮಾತಾದವರು. ಅವರ ಜೀವನ ಮತ್ತು ಆದರ್ಶಗಳು ಸ್ಫೂರ್ತಿಯ ಮೂಲವಾಗಿ ಉಳಿದಿವೆ.
ನನ್ನ ಸ್ನೇಹಿತ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಎನ್‌ಡಿಎ ಸರ್ಕಾರವು ಆಂಧ್ರಪ್ರದೇಶದ ಜನರಿಗಾಗಿ ಅವರು ಪಾಲಿಸಿದ ಆಕಾಂಕ್ಷೆಗಳನ್ನು ಮುಂದುವರಿಸಲು ಬದ್ಧವಾಗಿದೆ ಎಂದು ಮೋದಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ, (ಏಜನ್ಸೀಸ್).