ಚೆನ್ನೈನಲ್ಲಿ ನಡೆದ ಕಾವ್ಯಾ ಮಾರನ್ ಮತ್ತು ಅನಿರುದ್ಧ್ ವಿವಾಹ ಆರತಕ್ಷತೆಯಲ್ಲಿ ಜೊನಿತಾ ಭಾಗಿ.
ಜೊನಿತಾ ಗಾಂಧಿ ಮತ್ತು ಅನಿರುದ್ಧ್ ನಡುವಿನ ಪ್ರೀತಿ ವದಂತಿಗೆ ಬ್ರೇಕ್.
ಸ್ವೀಟೆಸ್ಟ್ ದಂಪತಿಗೆ ಶುಭಾಷಯ ಎಂದು ಹಾರೈಸಿದ ಗಾಯಕಿ ಕಾವ್ಯಾ ಮಾರನ್.
Jonita Gandhi Congratulates Anirudh: ಜೊನಿತಾ ಗಾಂಧಿ ಮತ್ತು ನಿರುದ್ಧ್ ರವಿಚಂದರ್ ಪ್ರೀತಿಸುತ್ತಿದ್ದರು, ಡೇಟಿಂಗ್ನಲ್ಲಿದ್ದರು ಎನ್ನುವ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಸದ್ಯ ಎಲ್ಲ ಊಹಾಪೋಹಗಳಿಗೆ ಗಾಯಕಿ ತೆರೆ ಎಳೆದಿದ್ದಾರೆ.
ಹೌದು, ಜೊನಿತಾ ಅವರು ಅನಿರುದ್ಧ್ ರವಿಚಂದರ್ -ಕಾವ್ಯಾ ಮಾರನ್ ಆರಕ್ಷತೆಯಲ್ಲಿ ಭಾಗಿಯಾಗಿ, ನವ ದಂಪತಿ ಜೊತೆಯಿರುವ ಮದುವೆ ಫೋಟೋ ಹಂಚಿಕೊಂಡು, ಕಂಗ್ರಾಟ್ಸ್ ಸ್ವೀಟೆಸ್ಟ್ ನ್ಯೂಲಿ ವೆಡ್ ಎಂದು ಕ್ಯಾಪ್ಶನ್ ಕೊಟ್ಟುಕೊಂಡಿದ್ದಾರೆ. ಈ ಮೂಲಕ ತಮ್ಮ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ ಅವರ ಮೇಲೆ ಹರಿದಾಡುತ್ತಿದ್ದ ಡೇಟಿಂಗ್ ವದಂತಿಗಳಿಗೆ ಮೌನವಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಗಾಯಕಿ ಜೊನಿತಾ ಗಾಂಧಿ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಕಾಂಬಿನೇಷನ್ನಲ್ಲಿ ಇಲ್ಲಿಯವರೆಗೂ ಮೂಡಿಬಂದಿರುವ ಎಲ್ಲ ಹಾಡುಗಳು ಸಖತ್ ಹಿಟ್ ಕಂಡಿವೆ. ಬೀಸ್ಟ್ ಸಿನಿಮಾದ ಅರೇಬಿಕ್ ಕುತು, ಡಾಕ್ಟರ್ ಸಿನಿಮಾದ ಚೆಲ್ಲಮ್ಮ ಚೆಲ್ಲಮ್ಮ, ವಾರಿಸು ಸಿನಿಮಾದ ಜಿಮಿಕಿ ಪೊನ್ನು, ಜವಾನ್ನ ಫರಾಟ್ಟಾ ಹಾಡುಗಳು ಇಂದಿಗೂ ಗುನುಗುವಂತೆ ಮಾಡುತ್ತದೆ.
2022 ಮತ್ತು 23ರ ಅವಧಿಯಲ್ಲಿ ಇಬ್ಬರ ಕಾಂಬಿನೇಷನ್ನ ಚೆಲ್ಲಮ್ಮ ಚೆಲ್ಲಮ್ಮ ಹಾಗೂ ಅರೇಬಿಕ್ ಕುತು ಸೂಪರ್ ಹಿಟ್ ಆಗಿದ್ದವು, ಇಲ್ಲಿಂದ ಇಬ್ಬರಿಗೂ ಆತ್ಮೀಯತೆ ಬೆಳೆದಿದೆ. ಇವರ ಕೆಮಿಸ್ಟ್ರಿ ಚೆನ್ನಾಗಿದೆ. ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂದಿದ್ದರು.
ಇನ್ನು ಅನಿರುದ್ಧ್ ರವಿಚಂದರ್ ಮದುವೆ ಸಂಭ್ರಮದ ವೇಳೆಯಲ್ಲಿ ನೆಟ್ಟಿಗರು, ಗಾಯಕಿ ಜೊನಿತಾ ಅವರ ಸ್ಟೋರಿ, ಪ್ರೊಫೈಲ್ ಫೋಟೋ, ಅದಕ್ಕೆ ಅವರು ಕೊಟ್ಟಿರುವ ಶೀರ್ಷಿಕೆಗಳನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಜೊನಿತಾ ವಿರಹ ವೇದನೆಯಲ್ಲಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದರು. ಇಷ್ಟೇ ಅಲ್ಲದೇ 'ವಿಟ್ಟು ಪೋನ ವಾಸಲಿಲೆ' ಎನ್ನುವ ಭಾವನಾತ್ಮಕ ಹಾಡನ್ನು ಇದೇ ಸಮಯದಲ್ಲಿ ಹಂಚಿಕೊಂಡಿದ್ದ ಕಾರಣ, ಪ್ರೀತಿ-ಡೇಟಿಂಗ್‌ನ ವದಂತಿ ದೃಢವಾಗುವಂತೆ ಆಗಿತ್ತು. ಆದ್ರೆ ಇಬ್ಬರೂ ಈ ಹಿಂದೆ ಡೇಟಿಂಗ್ ವದಂತಿಯನ್ನು ಎಂದೂ ಒಪ್ಪಿಕೊಂಡಿಲ್ಲ, ನಾವು ಕೇವಲ ಸ್ನೇಹಿತರು, ಮ್ಯೂಸಿಕ್ ಪಾರ್ಟ್ನರ್ ಅಷ್ಟೇ ಎಂದಿದ್ದಾರೆ.
ನ.21ರಂದು ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳದಲ್ಲಿ ನಡೆದ ಕಾವ್ಯಾ ಮಾರನ್ ಮತ್ತು ಅನಿರುದ್ಧ್ ವಿವಾಹ ಆರತಕ್ಷತೆಯಲ್ಲಿ ರಜನಿಕಾಂತ್, ಸಿಎಂ ವಿಜಯ್, ಸಂಗೀತ ಸ್ವರ್ಣಲಿಂಗಂ ಸೇರಿದಂತೆ ಅನೇಕರು ಆಗಮಿಸಿದ್ದರು. ರಾಜಕೀಯ ಮತ್ತು ಕ್ರಿಕೆಟ್ ಕ್ಷೇತ್ರಗಳ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತರಿಗೆ ಶುಭ ಹಾರೈಸಿದರು. ಜೊನಿತಾ ಸಹ ಭಾಗಿಯಾಗಿ, ನವ ದಂಪತಿಗೆ ಹಾರೈಸಿದ್ದಾರೆ. ಫೋಟೋವನ್ನು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಪರೋಕ್ಷವಾಗಿ ವದಂತಿಗಳಿಗೆ ಉತ್ತರ ಕೊಟ್ಟಿದ್ದಾರೆ ಗಾಯಕಿ ಜೊನಿತಾ, (ಏಜೆನ್ಸೀಸ್).