ಧನುಷ್​-ಐಶ್ವರ್ಯಾ ಮದ್ವೆ ಸಮಯದಲ್ಲಿ ಅನಿರುದ್ಧ್ ಇಷ್ಟು ಚಿಕ್ಕವರಾಗಿದ್ದರಾ? ಹಳೇ ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್! Anirudh Ravichander

ಇತ್ತೀಚೆಗಷ್ಟೇ ನವೆಂಬರ್ 11ರಂದು ಗ್ರೀಸ್‌ನಲ್ಲಿ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕಿ ಕಾವ್ಯ ಮಾರನ್ ಅವರ ವಿವಾಹವು ಆಪ್ತರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ನೆರವೇರಿತ್ತು.
Anirudh Ravichander
ಧನುಷ್​-ಐಶ್ವರ್ಯಾ ಮದ್ವೆ ಸಮಯದಲ್ಲಿ ಅನಿರುದ್ಧ್ ಇಷ್ಟು ಚಿಕ್ಕವರಾಗಿದ್ದರಾ? ಹಳೇ ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್!
Published on: 

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ( Anirudh Ravichander ) ಮತ್ತು ಕಾವ್ಯ ಮಾರನ್ ( Kavya Maran ) ಅವರ ವಿವಾಹ ಸಂಭ್ರಮದ ನಡುವೆಯೇ, ನಟ ಧನುಷ್ ( Actor Dhanush ) ಹಾಗೂ ಐಶ್ವರ್ಯಾ ರಜಿನಿಕಾಂತ್​ ಅವರ ಮದುವೆಯ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅನಿರುದ್ಧ್ ಅವರು ತೀರಾ ಚಿಕ್ಕ ಹುಡುಗನಾಗಿ ಕಾಣಿಸಿಕೊಂಡಿದ್ದು, ಅಂದಿನ ಪುಟ್ಟ ಅನಿರುದ್ಧ್ ಮತ್ತು ಇಂದಿನ ಮದುವೆ ಗಂಡು ಅನಿರುದ್ಧ್ ನಡುವಿನ ವ್ಯತ್ಯಾಸ ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ನವೆಂಬರ್ 11ರಂದು ಗ್ರೀಸ್‌ನಲ್ಲಿ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕಿ ಕಾವ್ಯ ಮಾರನ್ ಅವರ ವಿವಾಹವು ಆಪ್ತರ ಸಮ್ಮುಖದಲ್ಲಿ ಬಹಳ ಅದ್ಧೂರಿಯಾಗಿ ನೆರವೇರಿತ್ತು. ಇದರ ಬೆನ್ನಲ್ಲೇ ನವೆಂಬರ್ 21ರಂದು ಚೆನ್ನೈನಲ್ಲಿ ಅತ್ಯಂತ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಭವ್ಯ ಸಮಾರಂಭಕ್ಕೆ ತಮಿಳುನಾಡು ಮುಖ್ಯಮಂತ್ರಿ, ಹಲವು ರಾಜಕೀಯ ಗಣ್ಯರು, ಖ್ಯಾತ ಉದ್ಯಮಿಗಳು, ಕ್ರಿಕೆಟಿಗರು ಹಾಗೂ ಸೂಪರ್‌ಸ್ಟಾರ್ ರಜಿನಿಕಾಂತ್ ಸೇರಿದಂತೆ ಚಿತ್ರರಂಗದ ದಿಗ್ಗಜರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದರು.

Also Read
ಅನಿರುದ್ಧ್ ಮದ್ವೆ ಆರತಕ್ಷತೆಯಲ್ಲಿ ನಟ ಧನುಷ್ ಗೈರು: ಏನಿದು ಜೈಲರ್ ಎಂಟ್ರಿಯ ಕಥೆ? ಜಾಲತಾಣದಲ್ಲಿ ಹೀಗೊಂದು ಚರ್ಚೆ ಶುರು! Anirudh Ravichander
Anirudh Ravichander

ಆದರೆ, ಇಡೀ ದಕ್ಷಿಣ ಭಾರತದ ಗಮನ ಸೆಳೆದ ಈ ಅದ್ಧೂರಿ ಆರತಕ್ಷತೆಯಲ್ಲಿ ನಟ ಧನುಷ್ ಅವರ ಅನುಪಸ್ಥಿತಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಅನಿರುದ್ಧ್ ಅವರು ತಮ್ಮ ಮದುವೆ ಅಥವಾ ಆರತಕ್ಷತೆಗೆ ನಟ ಧನುಷ್ ಅವರಿಗೆ ಯಾವುದೇ ಆಹ್ವಾನ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಧನುಷ್ ಅವರಿಗೆ ಆಹ್ವಾನ ನೀಡದ ಕಾರಣ ಅವರೂ ಬಂದಿರಲಿಲ್ಲ, ಮತ್ತೊಂದೆಡೆ ಧನುಷ್ ಮತ್ತು ಐಶ್ವರ್ಯಾ ನಡುವಿನ ವಿಚ್ಛೇದನ ವಿಚಾರವೇ ಇದಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ.

ವಾಸ್ತವವಾಗಿ, ಅನಿರುದ್ಧ್ ರವಿಚಂದರ್ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಲು ನಟ ಧನುಷ್ ಅವರೇ ಪ್ರಮುಖ ಕಾರಣರಾಗಿದ್ದರು. ಧನುಷ್ ನಿರ್ಮಾಣದ ಸೂಪರ್ ಹಿಟ್ '3' ಸಿನಿಮಾದ ಮೂಲಕವೇ ಅನಿರುದ್ಧ್ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಮೊದಲ ಚಿತ್ರದಲ್ಲೇ ಸಂಚಲನ ಮೂಡಿಸಿದ್ದರು. ಅಲ್ಲದೆ, ಅನಿರುದ್ಧ್ ಅವರು ರಜನಿಕಾಂತ್ ಅವರ ಪತ್ನಿ ಲತಾ ಅವರ ಸೋದರಳಿಯನಾಗಿದ್ದು, ಧನುಷ್ ಮತ್ತು ಐಶ್ವರ್ಯಾ ಅವರಿಗೆ ಅತ್ಯಂತ ಆಪ್ತರಾಗಿದ್ದರು. ಆದರೆ ಕಾಲಾನಂತರದಲ್ಲಿ ಧನುಷ್ ಮತ್ತು ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ವಾಸಿಸುತ್ತಿರುವ ಬೆನ್ನಲ್ಲೇ, ಧನುಷ್ ಹಾಗೂ ಅನಿರುದ್ಧ್ ನಡುವಿನ ಸ್ನೇಹವೂ ದೂರವಾಗಿದೆ ಎನ್ನಲಾಗಿದೆ.

Also Read
ಸನ್​ ಗ್ರೂಪ್​ ಕಂಪನಿಯ ಉದ್ಯೋಗಿಗಳಿಗೆ ಕಾವ್ಯ ಮಾರನ್​ ದುಬಾರಿ ಗಿಫ್ಟ್​! ಓಪನ್​ ಮಾಡಿದವರಿಗೆ ಕಾದಿತ್ತು ಬಿಗ್ ಸರ್ಪ್ರೈಸ್​​... Kavya Maran
Anirudh Ravichander

ಈ ಎಲ್ಲಾ ಬೆಳವಣಿಗೆಗಳ ನಡುವೆ, 2004ರಲ್ಲಿ ನಡೆದ ಧನುಷ್ ಮತ್ತು ಐಶ್ವರ್ಯಾ ಅವರ ಮದುವೆಯ ಅಪರೂಪದ ಫೋಟೋವೊಂದು ಈಗ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಆ ಮದುವೆ ಫೋಟೋದಲ್ಲಿ ನವಜೋಡಿಯ ಪಕ್ಕದಲ್ಲೇ ಅನಿರುದ್ಧ್ ತೀರಾ ಚಿಕ್ಕ ಬಾಲಕನಂತೆ ಮುಗ್ಧವಾಗಿ ನಿಂತಿರುವುದು ಕಂಡುಬಂದಿದೆ. ತಮ್ಮ ನೆಚ್ಚಿನ ರಾಕ್‌ಸ್ಟಾರ್ ಸಂಗೀತ ನಿರ್ದೇಶಕನ ಬಾಲ್ಯದ ಈ ಅಪರೂಪದ ಫೋಟೋ ಕಂಡ ಅಭಿಮಾನಿಗಳು ಧನುಷ್​ ಮದುವೆ ಸಮಯದಲ್ಲಿ "ಅನಿರುದ್ಧ್ ಇಷ್ಟು ಚಿಕ್ಕ ಹುಡುಗನಾಗಿದ್ದರಾ?" ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ, (ಏಜೆನ್ಸೀಸ್​).