ಅನಿರುದ್ಧ್ ಮದ್ವೆ ಆರತಕ್ಷತೆಯಲ್ಲಿ ನಟ ಧನುಷ್ ಗೈರು: ಏನಿದು ಜೈಲರ್ ಎಂಟ್ರಿಯ ಕಥೆ? ಜಾಲತಾಣದಲ್ಲಿ ಹೀಗೊಂದು ಚರ್ಚೆ ಶುರು! Anirudh Ravichander

ಸೂಪರ್‌ಸ್ಟಾರ್ ರಜನಿಕಾಂತ್, ಅಜಿತ್ ಕುಮಾರ್, ಎಂ.ಎಸ್. ಧೋನಿ, ಸಿಎಂ ವಿಜಯ್ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯೊಬ್ಬರ ಅನುಪಸ್ಥಿತಿ ಎಲ್ಲರ ಗಮನ ಸೆಳೆದಿದೆ. ಅನಿರುದ್ಧ್ ಅವರ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ನಟ ಧನುಷ್ ಈ ಆರತಕ್ಷತೆಗೆ ಗೈರಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.
Anirudh Ravichander
ಅನಿರುದ್ಧ್ ಮದ್ವೆ ಆರತಕ್ಷತೆಯಲ್ಲಿ ನಟ ಧನುಷ್ ಗೈರು: ಏನಿದು ಜೈಲರ್ ಎಂಟ್ರಿಯ ಕತೆ? ಜಾಲತಾಣದಲ್ಲಿ ಹೀಗೊಂದು ಚರ್ಚೆ ಶುರು!
Published on: 

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ( Anirudh Ravichander ) ಮತ್ತು ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ( Kavya Maran ) ಅವರ ಅದ್ಧೂರಿ ವಿವಾಹ ಆರತಕ್ಷತೆ ಚೆನ್ನೈನಲ್ಲಿ ನಡೆದಿದ್ದು, ಚಿತ್ರರಂಗ, ರಾಜಕೀಯ ಹಾಗೂ ಕ್ರೀಡಾ ಲೋಕದ ದಿಗ್ಗಜರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್, ಅಜಿತ್ ಕುಮಾರ್, ಎಂ.ಎಸ್. ಧೋನಿ, ಸಿಎಂ ವಿಜಯ್ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯೊಬ್ಬರ ಅನುಪಸ್ಥಿತಿ ಎಲ್ಲರ ಗಮನ ಸೆಳೆದಿದೆ. ಅನಿರುದ್ಧ್ ಅವರ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ನಟ ಧನುಷ್ ಈ ಆರತಕ್ಷತೆಗೆ ಗೈರಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.

Also Read
ಚಳಿಗಾಲದಲ್ಲಿ ಹೊದಿಕೆಯೊಳಗೆ ನಾಗರಹಾವು ಮಲಗಿಸಿಕೊಳ್ಳುತ್ತಿದ್ದ ಕೈಲಾಶ್ ಖೇರ್: ರೋಚಕ ಸಂಗತಿ ಬಿಚ್ಚಿಟ್ಟ ಖ್ಯಾತ ಗಾಯಕ! Kailash Kher
Anirudh Ravichander

ಅನಿರುದ್ಧ್ ರವಿಚಂದರ್ ಅವರು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡುವಲ್ಲಿ ಧನುಷ್ ಅವರ ಪಾತ್ರ ಬಹಳ ದೊಡ್ಡದಿದೆ. ಧನುಷ್ ನಟನೆಯ '3' ಚಿತ್ರದ ಮೂಲಕ ಅನಿರುದ್ಧ್ ಸಂಗೀತ ಲೋಕಕ್ಕೆ ಕಾಲಿಟ್ಟರು. ಈ ಚಿತ್ರದ 'ವೈ ದಿಸ್ ಕೊಲವೆರಿ ಡಿ' ಹಾಡು ಜಾಗತಿಕ ಮಟ್ಟದಲ್ಲಿ ಸೂಪರ್ ಹಿಟ್ ಆಗುವ ಮೂಲಕ ಅನಿರುದ್ಧ್ ಅವರಿಗೆ ರಾತ್ರೋರಾತ್ರಿ ದೇಶಾದ್ಯಂತ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ತದನಂತರ ಈ ಜೋಡಿ 'ವೇಲೈಇಲ್ಲಾ ಪಟ್ಟಧಾರಿ' (VIP), 'ಮಾರಿ' ಮತ್ತು 'ತಂಗ ಮಗನ್' ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು.

ಇಷ್ಟೊಂದು ಗಾಢವಾದ ವೃತ್ತಿಪರ ಬಾಂಧವ್ಯ ಮತ್ತು ಆಪ್ತ ಸ್ನೇಹ ಹೊಂದಿದ್ದ ಕಾರಣ, ಅನಿರುದ್ಧ್ ಅವರ ಮದುವೆ ಆರತಕ್ಷತೆಗೆ ಧನುಷ್ ಖಂಡಿತವಾಗಿಯೂ ಹಾಜರಾಗುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಧನುಷ್ ಅವರ ಗೈರುಹಾಜರಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಹಳೆಯ ವದಂತಿಗಳಿಗೆ ಮತ್ತೆ ಜೀವ ನೀಡಿದೆ. ಕಳೆದ ಕೆಲವು ಸಮಯದಿಂದ ಧನುಷ್ ಮತ್ತು ಅನಿರುದ್ಧ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದ್ದವು. ಇದೀಗ ಮದುವೆಯಂತಹ ಶುಭ ಸಮಾರಂಭಕ್ಕೂ ಧನುಷ್ ಬಾರದಿರುವುದು ನೆಟ್ಟಿಗರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಮತ್ತೊಂದೆಡೆ, ಅನಿರುದ್ಧ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹತ್ತಿರದ ಸಂಬಂಧಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಧನುಷ್ ಅವರು ಈ ಹಿಂದೆ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದರು. ಆದರೆ 2022ರಲ್ಲಿ ದಂಪತಿ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿ, ಬಳಿಕ ಕಾನೂನುಬದ್ಧವಾಗಿ ವಿಚ್ಛೇದನ ಪಡೆದುಕೊಂಡರು. ಈ ಕೌಟುಂಬಿಕ ಹಿನ್ನೆಲೆ ಮತ್ತು ಹಳೆಯ ವೈಮನಸ್ಸಿನ ಕಾರಣದಿಂದಲೇ ಧನುಷ್ ಅವರು ರಜನಿಕಾಂತ್ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದ ಈ ಕಾರ್ಯಕ್ರಮದಿಂದ ದೂರ ಉಳಿದಿರಬಹುದು ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಚರ್ಚಿಸುತ್ತಿದ್ದಾರೆ.

Also Read
ಹರ್ಷಿತ್​ ಔಟ್​ ಆಗ್ತಿದ್ದಂತೆ ಸುತ್ತುವರಿದ ಪಾಕ್ ಆಟಗಾರರು: ತಿಲಕ್​ ವರ್ಮಾ ಎಂಟ್ರಿ, ಮೈದಾನದಲ್ಲಿ ನಡೆಯಿತು ಹೈಡ್ರಾಮಾ! Rising Stars Asia Cup
Anirudh Ravichander

ಸದ್ಯಕ್ಕೆ ಧನುಷ್ ಗೈರಾಗಿರುವುದರ ಹಿಂದಿನ ನಿಖರ ಕಾರಣ ಏನೆಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ, ಇವೆಲ್ಲವೂ ಕೇವಲ ಊಹಾಪೋಹಗಳಷ್ಟೇ. ಇದೇ ವೇಳೆ, ಅಸಲಿಗೆ ಅನಿರುದ್ಧ್ ಅವರು ಧನುಷ್ ಅವರಿಗೆ ಮದುವೆಯ ಆಮಂತ್ರಣ ನೀಡಿದ್ದರೇ ಅಥವಾ ಕೇವಲ ಪಿಆರ್ ತಂಡದಿಂದ ಆಹ್ವಾನ ಕಳುಹಿಸಲಾಗಿತ್ತೇ ಎಂಬ ಪ್ರಶ್ನೆಗಳನ್ನೂ ಅಭಿಮಾನಿಗಳು ಎತ್ತುತ್ತಿದ್ದಾರೆ. ಒಟ್ಟಿನಲ್ಲಿ, ಧನುಷ್ ಮತ್ತು ಅನಿರುದ್ಧ್ ನಡುವಿನ ಈ ಅಂತರಕ್ಕೆ ನಿಜವಾದ ಕಾರಣವೇನು ಎಂಬುದು ಅವರಿಬ್ಬರಲ್ಲಿ ಯಾರಾದರೂ ಬಹಿರಂಗವಾಗಿ ಮಾತನಾಡಿದಾಗ ಮಾತ್ರ ಸ್ಪಷ್ಟವಾಗಲಿದೆ, (ಏಜೆನ್ಸೀಸ್​).