ಚಳಿಗಾಲದಲ್ಲಿ ಹೊದಿಕೆಯೊಳಗೆ ನಾಗರಹಾವು ಮಲಗಿಸಿಕೊಳ್ಳುತ್ತಿದ್ದ ಕೈಲಾಶ್ ಖೇರ್: ರೋಚಕ ಸಂಗತಿ ಬಿಚ್ಚಿಟ್ಟ ಖ್ಯಾತ ಗಾಯಕ! Kailash Kher

ರಣವೀರ್ ಅಲ್ಲಾಬಾಡಿಯಾ (Ranveer Allahabadia) ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕೈಲಾಶ್ ಖೇರ್, ತಮ್ಮ ರಿಷಿಕೇಶದ ದಿನಗಳನ್ನು ಮೆಲುಕು ಹಾಕಿದ್ದಾರೆ.
Kailash Kher
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕ ಕೈಲಾಶ್ ಖೇರ್
Published on: 

ಮುಂಬೈ: ತಮ್ಮ ಆಧ್ಯಾತ್ಮಿಕ ಗಾಯನ ಮತ್ತು ಶಿವನ ಮೇಲಿನ ಅಪಾರ ಭಕ್ತಿಯಿಂದಲೇ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕ ಕೈಲಾಶ್ ಖೇರ್ ( Kailash Kher ), ತಮ್ಮ ಯೌವನದ ದಿನಗಳ ಅತ್ಯಂತ ರೋಚಕ ಹಾಗೂ ಅಪಾಯಕಾರಿ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ.

ಭಾರತದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ನಾಗರಹಾವನ್ನು (Cobra) ಕೈಲಾಶ್ ಖೇರ್ ಬರೋಬ್ಬರಿ ಮೂರು ತಿಂಗಳ ಕಾಲ ಸಾಕಿದ್ದಲ್ಲದೆ, ಚಳಿಗಾಲದಲ್ಲಿ ತಮ್ಮ ಹೊದಿಕೆಯ ಒಳಗೆ ಮಲಗಿಸಿಕೊಳ್ಳುತ್ತಿದ್ದರು ಎಂಬ ಅಚ್ಚರಿಯ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ಈ ರಹಸ್ಯವನ್ನು ಹಂಚಿಕೊಂಡಿರುವ ಅವರು, ಆ ವಿಷಕಾರಿ ಹಾವನ್ನು ಮೂರು ತಿಂಗಳ ನಂತರ ಕಾಡಿಗೆ ಬಿಟ್ಟಿದ್ದೇಕೆ ಎಂಬುದನ್ನೂ ವಿವರಿಸಿದ್ದಾರೆ.

Also Read
ಹರ್ಷಿತ್​ ಔಟ್​ ಆಗ್ತಿದ್ದಂತೆ ಸುತ್ತುವರಿದ ಪಾಕ್ ಆಟಗಾರರು: ತಿಲಕ್​ ವರ್ಮಾ ಎಂಟ್ರಿ, ಮೈದಾನದಲ್ಲಿ ನಡೆಯಿತು ಹೈಡ್ರಾಮಾ! Rising Stars Asia Cup
Kailash Kher

ರಣವೀರ್ ಅಲ್ಲಾಬಾಡಿಯಾ (Ranveer Allahabadia) ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕೈಲಾಶ್ ಖೇರ್, ತಮ್ಮ ರಿಷಿಕೇಶದ ದಿನಗಳನ್ನು ಮೆಲುಕು ಹಾಕಿದ್ದಾರೆ. "ನಾವು ಸುಮಾರು 12-13 ವರ್ಷಗಳ ಕಾಲ ರಿಷಿಕೇಶದಲ್ಲಿ ವಾಸವಿದ್ದೆವು. ಅಲ್ಲಿಯೇ ನೀಲಕಂಠ ಕ್ಷೇತ್ರವೂ ಇದೆ. ಆ ಸಮಯದಲ್ಲಿ ನಮ್ಮೊಂದಿಗೆ ವೇದ ವಿದ್ವಾಂಸರ ಒಂದು ತಂಡವಿತ್ತು, ಅವರೊಂದಿಗೆ ನಾವು ಸಾಕಷ್ಟು ಬೆಟ್ಟಗುಡ್ಡಗಳನ್ನು ಹತ್ತುತ್ತಿದ್ದೆವು. ಕಾಡಿನಲ್ಲಿ ದ್ರಾಕ್ಷಿಹಣ್ಣಿನಂತಿರುವ 'ಗುಡ್ಡಿಯಾ ನಿಂಬೆ' ಎಂಬ ಹಣ್ಣು ಹೇರಳವಾಗಿ ಸಿಗುತ್ತಿತ್ತು, ಹಸಿವಾದಾಗ ಮರದಿಂದ ಬಿದ್ದ ಆ ಹಣ್ಣುಗಳನ್ನೇ ನಾವು ತಿನ್ನುತ್ತಿದ್ದೆವು. ನಾವು ಅಕ್ಷರಶಃ ಮಂಗಗಳಂತೆ ಬದುಕಿದ್ದೆವು, ಅದಕ್ಕಾಗಿಯೇ ಶಿವ ಮತ್ತು ಹನುಮಂತನ ಕೃಪೆ ನಮ್ಮ ಮೇಲಿದೆ. ನಮಗೆ ಯಾವುದೇ ಅಪಾಯದ ಭಯವಿಲ್ಲ, ಸಾವಿನ ಭಯವೂ ಇಲ್ಲ, ಹುಟ್ಟು ಮತ್ತು ಸಾವು ಎರಡನ್ನೂ ನಾವು ಒಂದೇ ರೀತಿ ನೋಡುತ್ತೇವೆ ಎಂದು ತಮ್ಮ ಆಧ್ಯಾತ್ಮಿಕ ಜೀವನಶೈಲಿಯನ್ನು ವಿವರಿಸಿದ್ದಾರೆ.

ಇದೇ ವೇಳೆ ನಾಗರಹಾವು ಸಾಕಿದ ಘಟನೆಯನ್ನು ವಿವರಿಸಿದ ಅವರು, "ಆಗ ನನಗೆ ಸುಮಾರು 20 ವರ್ಷ ವಯಸ್ಸಿರಬಹುದು, ನನಗೆ ಅಷ್ಟೊಂದು ತಿಳುವಳಿಕೆಯೂ ಇರಲಿಲ್ಲ. ನಾವು ಒಂದು ನಾಗರಹಾವನ್ನು ಸಾಕಿದ್ದೆವು. ಅದು ಸುಮಾರು ಮೂರು ತಿಂಗಳ ಕಾಲ ನಮ್ಮೊಂದಿಗೇ ಇತ್ತು ಮತ್ತು ಚಳಿಗಾಲವಾಗಿದ್ದರಿಂದ ನಮ್ಮ ಹೊದಿಕೆಯ ಒಳಗೆ ನಮ್ಮೊಂದಿಗೇ ಮಲಗುತ್ತಿತ್ತು. ನಾವು ಎಲ್ಲಿಗೆ ಹೋದರೂ ಅದನ್ನು ನಮ್ಮ ಬ್ಯಾಗ್‌ನಲ್ಲಿ (Backpack) ಹಾಕಿಕೊಂಡು ಕರೆದೊಯ್ಯುತ್ತಿದ್ದೆವು" ಎಂದಿದ್ದಾರೆ. ಆದರೆ, ಒಂದು ದಿನ ಅವರಿಗೆ ತೀವ್ರ ಪಶ್ಚಾತ್ತಾಪ ಉಂಟಾಯಿತು, ಆ ಹಾವಿಗೆ ಆಹಾರ ನೀಡಲು ಇಲಿಗಳನ್ನು ಕೊಲ್ಲಬೇಕಾಗಿದ್ದರಿಂದ, ಒಂದು ಜೀವಿಯನ್ನು ಸಾಕಲು ಇನ್ನೊಂದು ಜೀವಿಯನ್ನು ಕೊಲ್ಲುವಷ್ಟು ಕ್ರೂರಿಗಳಾಗುವುದು ಬೇಡ ಎಂದು ನಿರ್ಧರಿಸಿ ಆ ಹಾವನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾಗಿ ಕೈಲಾಶ್ ಖೇರ್ ತಿಳಿಸಿದ್ದಾರೆ.

Also Read
ಖಾಸಗಿ ಚಾಟ್​ ಸೋರಿಕೆ ಬೆನ್ನಲ್ಲೇ ಮಿಸ್ ಯೂನಿವರ್ಸ್ ವಿಯೆಟ್ನಾಂಗೆ ಬಿಗ್​ ಶಾಕ್​: ಸೌಂದರ್ಯ ಪಟ್ಟ ಕಳೆದುಕೊಂಡ ಚೆಲುವೆ..! Nguyen Quynh Anh
Kailash Kher

ನಾಗರಹಾವಿನೊಂದಿಗಿನ ತಮ್ಮ ಒಡನಾಟದ ಬಗ್ಗೆ ಮತ್ತಷ್ಟು ಕುತೂಹಲಕಾರಿ ಮಾಹಿತಿ ಹಂಚಿಕೊಂಡ ಗಾಯಕ, ಆ ಹಾವಿನ ವಿಷದ ಹಲ್ಲುಗಳನ್ನು ತೆಗೆಯಲಾಗಿತ್ತಾದರೂ, ಅದರ ಬುಸುಗುಟ್ಟುವಿಕೆಯಲ್ಲಿ ವಿಷದ ಅಂಶವಿತ್ತು. ಹಾಗಾಗಿಯೇ ಎಲ್ಲರಿಗೂ ಅದನ್ನು ಸಾಕಲು ಸಾಧ್ಯವಿಲ್ಲ, ಆದರೆ ಆ ಕಾಲದಲ್ಲಿ ನಮ್ಮ ತಿಳುವಳಿಕೆ ಹಾಗಿತ್ತು. ನಾವು ಸಾಧು-ಸಂತರ ನಡುವೆ, ಕಾಡು ಮತ್ತು ಪರ್ವತಗಳಲ್ಲಿ ವಾಸವಿದ್ದೆವು. ಕಲ್ಲು-ಮುಳ್ಳು, ಕೀಟಗಳ ನಡುವೆ ಬೆಳೆದಿದ್ದರಿಂದ ನಮಗೆ ಭಯ ಮತ್ತು ಸಂಕೋಚ ದೂರವಾಗಿತ್ತು ಎಂದು ಹೇಳಿದ್ದಾರೆ, (ಏಜೆನ್ಸೀಸ್​).