ಸಿನಿವಾಣಿ

'ಜೋಗಿ' ಪ್ರೇಮ್​ ಬಿಡುಗಡೆ ಮಾಡಿದರು 'ಕಾಕ್ಟೇಲ್​' ಚಿತ್ರದ ಪೋಸ್ಟರ್​ ...

ಬೆಂಗಳೂರು: ಕನ್ನಡದಲ್ಲಿ ಸದ್ದಿಲ್ಲದೆ ಹಲವು ಸಸ್ಪೆನ್ಸ್​ ಥ್ರಿಲ್ಲರ್​​ ಮತ್ತು ಮರ್ಡರ್​ ಮಿಸ್ಟ್ರಿ ಚಿತ್ರಗಳು ತಯಾರುಗುತ್ತಿದ್ದು, ಈ ಪೈಕಿ 'ಕಾಕ್ಟೇಲ್​' ಸಹ ಇಂದು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಮೇನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಅದಕ್ಕೂ ಮುನ್ನ ಇತ್ತೀಚೆಗೆ ಈ ಚಿತ್ರದ ಥೀಮ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್‌ನ್ನು ನಟ-ನಿರ್ದೇಶಕ ಮತ್ತು 'ಜೋಗಿ' ಖ್ಯಾತಿಯ ಪ್ರೇಮ್​ ಬಿಡುಗಡೆ ಮಾಡಿದ್ದಾರೆ. ಚಿತ್ರದ ವಿಭಿನ್ನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿರುವ ಅವರು, ಚಿತ್ರತಂಡದ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.‘

ವಿಜಯಲಕ್ಷೀ ಕಂಬೈನ್ಸ್ ಬ್ಯಾನರ್‌ನಲ್ಲಿ ಡಾ.ಶಿವಪ್ಪ ನಿರ್ಮಾಣದ ’ಕಾಕ್ಟೈಲ್’ ಚಿತ್ರವು ಸದ್ಯ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಇನ್ನು, ಶ್ರೀರಾಮ್​ ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಒಂದೇ ಹೆಸರಿನ ಮತ್ತು ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ.

ಹೊಸ ಪ್ರತಿಭೆಗಳಾದ ವಿರೇನ್ ಕೇಶವ್ ಹಾಗೂ ಚರೀಷ್ಮಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅನುಪಮ್‌ಖೇರ್ ಅವರ ಸಂಸ್ಥೆಯಲ್ಲಿ ನಟನೆಯ ಪಾಠಗಳನ್ನು ವೀರೇನ್‌ಕೇಶವ್ ಕಲಿತು ಬಂದಿದ್ದಾರೆ. ಚರಿಷ್ಮಾ ಅವರಿಗೆ ಚಿತ್ರತಂಡವೇ ವರ್ಕ್‌ಶಾಪ್ ಮಾಡಿದೆ. ಇವರೊಂದಿಗೆ ಶೋಭರಾಜ್, ಮಹಾಂತೇಶ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು, ರಮೇಶ್‌ ಪಂಡಿತ್ ಮುಂತಾದವರ ತಾರಗಣವಿದೆ.

ಚಿತ್ರಕ್ಕೆ ಲೋಕಿ ತವಸ್ಯ ಸಂಗೀತ ಸಂಯೋಜಸಿದ್ದು, ರವಿವರ್ಮ(ಗಂಗು) ಛಾಯಾಗ್ರಹಣ ಮಾಡಿದ್ದಾರೆ. ಸದ್ಯದಲ್ಲೆ ಟ್ರೇಲರ್ ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದೆ.