ಸಿನಿವಾಣಿ

ಸಸ್ಪೆನ್ಸ್ ಕಥೆಗೆ ಡಾ. ರಾಜ್ ಅಭಿನಯದ ಸೂಪರ್ ಹಿಟ್ ಚಿತ್ರದ ಶೀರ್ಷಿಕೆ ...

ಬೆಂಗಳೂರು: ಕನ್ನಡದಲ್ಲಿ ನಿರ್ಮಾಣಗೊಂಡ ಮೊದಲ ಬಾಂಡ್​ ಶೈಲಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಡಾ. ರಾಜಕುಮಾರ್​ ಅಭಿನಯದ 'ಜೇಡರ ಬಲೆ'. ಈಗ 54 ವರ್ಷಗಳ ನಂತರ ಮತ್ತೆ ಇದೇ ಹೆಸರಿನ ಚಿತ್ರವೊಂದು ಪ್ರಾರಂಭವಾಗುವುದಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆದಿದೆ.

ಈ ಹಿಂದೆ 'ಮಂಗಳವಾರ ರಜಾದಿನ' ಚಿತ್ರ ನಿರ್ದೇಶಿಸಿದ್ದ ಯುವಿನ್, 'ಜೇಡರ ಬಲೆ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗದೊಂದಿಗೆ ಹಲವು ವರ್ಷಗಳ ನಂಟು ಹೊಂದಿರುವ ವಿಕಾಸ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿದ್ವಿಕ್ ಪ್ರೊಡಕ್ಷನ್ ಎಂಬ ನೂತನ ನಿರ್ಮಾಣ ಸಂಸ್ಥೆಯ ಲಾಂಛನದಲ್ಲಿ 'ಜೇಡರಬಲೆ' ನಿರ್ಮಾಣವಾಗಲಿದೆ.

ಈ ಕುರಿತು ಮಾತನಾಡುವ ವಿಕಾಸ್​ ಗೌಡ, 'ನಾನು ಅಣ್ಣಾವ್ರ ಅಭಿಮಾನಿ. ಅವರ ಚಿತ್ರಗಳೆಂದರೆ ನನಗೆ ಇಷ್ಟ. ನಮ್ಮ ಚಿತ್ರ ಕೂಡ ಸಸ್ಪೆನ್ಸ್ ಕಥಾಹಂದರ ಹೊಂದಿರುವುದರಿಂದ 'ಜೇಡರಬಲೆ' ಎಂಬ ಶೀರ್ಷಿಕೆಯಿಟ್ಟಿದ್ದೇವೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸುತ್ತೇವೆ' ಎನ್ನುತ್ತಾರೆ.

ಈಗ ಚಿತ್ರದ ಶೀರ್ಷಿಕೆ ಅನಾವಾರಣವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು.