ಪೆದ್ದಿ ಚಿತ್ರದ ಬೋಲ್ಡ್ ಸೀನ್ ಹಿಂದೆ ನಡೆದಿತ್ತು ಹೈಡ್ರಾಮಾ: ಜಾನ್ವಿ ಇನ್​ಸ್ಟಾಗ್ರಾಮ್​ ಚಾಟ್​ನಿಂದ ಸ್ಪೋಟಕ ಮಾಹಿತಿ ಲೀಕ್! Janhvi Kapoor  
ಸಿನಿವಾಣಿ

ಪೆದ್ದಿ ಚಿತ್ರದ ಬೋಲ್ಡ್ ಸೀನ್ ಹಿಂದೆ ನಡೆದಿತ್ತು ಹೈಡ್ರಾಮಾ: ಜಾನ್ವಿ ಇನ್​ಸ್ಟಾಗ್ರಾಮ್​ ಚಾಟ್​ನಿಂದ ಸ್ಪೋಟಕ ಮಾಹಿತಿ ಲೀಕ್! Janhvi Kapoor

ಪ್ರಮುಖ ಮುಖ್ಯಾಂಶಗಳು

  • ಪೆದ್ದಿ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರನ್ನು ಅತಿ ಬೋಲ್ಡ್​ ಆಗಿ ತೋರಿಸಿರುವ ಕುರಿತು ಭಾರಿ ಆಕ್ರೋಶ
  • ನಿರ್ದೇಶಕರೇ ಬಂದು ಕ್ಷಮೆಯಾಚಿಸಿದ ಬಳಿಕವೂ ನಿಲ್ಲದ ಸಿನಿಮಾ ಮೇಲಿನ ವಿವಾದ ಹಾಗೂ ಚರ್ಚೆ
  • ಜಾನ್ವಿ ಮತ್ತು ಮತ್ತೊಬ್ಬ ವ್ಯಕ್ತಿಯ ನಡುವೆ ನಡೆದಿದೆ ಎನ್ನಲಾದ ಇನ್‌ಸ್ಟಾಗ್ರಾಮ್ ಚಾಟ್‌ ಸ್ಕ್ರೀನ್‌ಶಾಟ್‌ಗಳು ಲೀಕ್
Janhvi Kapoor : 'ಪೆದ್ದಿ' ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರನ್ನು ಅತಿ ಬೋಲ್ಡ್​ ಆಗಿ ತೋರಿಸಿರುವ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸ್ವತಃ ಆ ಚಿತ್ರದ ನಿರ್ದೇಶಕರೇ ಬಂದು ಕ್ಷಮೆಯಾಚಿಸಿದ ಬಳಿಕವೂ ಸಿನಿಮಾ ಮೇಲಿನ ವಿವಾದ ಹಾಗೂ ಚರ್ಚೆಗಳು ಮಾತ್ರ ಸದ್ಯಕ್ಕೆ ನಿಲ್ಲುತ್ತಿಲ್ಲ. ಇದೀಗ ಇನ್​ಸ್ಟಾಗ್ರಾಮ್​ ಚಾಟ್ ಲೀಕ್​ ಆಗಿರುವುದು ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದೆ.
ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಇತ್ತೀಚೆಗಷ್ಟೇ ಮಾತನಾಡಿ, ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಎದುರಾಗಬಹುದಾದ ಆಕ್ರೋಶದ ಬಗ್ಗೆ ನಮಗೆ ಮೊದಲೇ ಅರಿವಿತ್ತು. ನಮ್ಮಿಂದ ತಪ್ಪಾಗಿದೆ. ಹೀಗಾಗಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಅಲ್ಲದೆ, ಆಕ್ಷೇಪಾರ್ಹ ದೃಶ್ಯಗಳನ್ನು ಸಿನಿಮಾದಿಂದ ಎಡಿಟ್ ಮಾಡಿ ತೆಗೆದುಹಾಕಲಾಗುವುದು ಎಂದು ಭರವಸೆ ಸಹ ನೀಡಿದ್ದರು. ಅದರಂತೆ ಎಡಿಟ್​ ಸಹ ಮಾಡಲಾಗಿದೆ.
ಈ ವಿವಾದಾತ್ಮಕ ಚರ್ಚೆಗಳ ನಡುವೆಯೇ, ನಟಿ ಜಾನ್ವಿ ಕಪೂರ್ ಮತ್ತು ಮತ್ತೊಬ್ಬ ವ್ಯಕ್ತಿಯ ನಡುವೆ ನಡೆದಿದೆ ಎನ್ನಲಾದ ಇನ್‌ಸ್ಟಾಗ್ರಾಮ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ನಿನ್ನೆ ಜಾನ್ವಿ ಅವರ ಅಭಿಮಾನಿಗಳ ಪೇಜ್ ಮೂಲಕ ಲೀಕ್ ಆಗಿವೆ. ಚಿತ್ರದಲ್ಲಿ ತಮ್ಮನ್ನು ಅತಿ ಹಾಟ್​ ಆಗಿ ತೋರಿಸುವ ಕಲ್ಪನೆಯನ್ನು ತಾವು ಹೇಗೆ ವಿರೋಧಿಸಿದ್ದೆ ಹಾಗೂ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದ ಕ್ಯಾಮೆರಾ ಆ್ಯಂಗಲ್‌ಗಳ ಬಗ್ಗೆ ಚಿತ್ರತಂಡದ ಎದುರು ತಮ್ಮ ಆತಂಕವನ್ನು ಹೇಗೆ ಹಂಚಿಕೊಂಡಿದ್ದೆ ಎಂಬುದನ್ನು ಜಾನ್ವಿ ಅವರದ್ದು ಎನ್ನಲಾದ ಇನ್‌ಸ್ಟಾಗ್ರಾಮ್ ಚಾಟ್‌ನ ಸ್ಕ್ರೀನ್​ಶಾಟ್​​ಗಳು ಎತ್ತಿ ತೋರಿಸುತ್ತವೆ.
ಬೋಲ್ಡ್​ ಆ್ಯಂಗಲ್‌ಗಳನ್ನು ಇಡಲು ಪ್ರಯತ್ನಿಸಿದ್ದಕ್ಕಾಗಿ ರಾಮ್ ಸರ್ (ರಾಮ್ ಚರಣ್) ಅವರು ತುಂಬಾ ಸಿಟ್ಟಾಗಿ ನಿರ್ದೇಶಕರನ್ನು ಬೈದರು. ರಾಮ್​ ಸರ್​, ನಿಜಕ್ಕೂ ಒಳ್ಳೆಯವರು. ಸಿನಿಮಾದಲ್ಲಿ ನನ್ನ ಸೊಂಟ ಹಾಗೂ ಎದೆಯ ಭಾಗದ ಶಾಟ್‌ಗಳನ್ನು ತೆಗೆದುಕೊಳ್ಳಬೇಡಿ ಎಂದು ನಾನು ನಿರ್ದೇಶಕರಿಗೆ ಮೊದಲೇ ಹೇಳಿದ್ದೆ. ಆ ರೀತಿಯ ಆ್ಯಂಗಲ್‌ಗಳನ್ನು ಬಳಸದಿರಲು ರಾಮ್ ಸರ್ ಅವರೇ ನಿರ್ದೇಶಕರಿಗೆ ಜೋರಾಗಿ ಗದರಿ ಬ್ರೇಕ್ ಹಾಕಿದರು. ಸಿನಿಮಾ ಹೇಗೆ ಮೂಡಿಬರಲಿದೆಯೋ ನನಗಂತೂ ತಿಳಿಯುತ್ತಿಲ್ಲ, ನಾನು ಸದ್ಯ ಮುಂಬೈಗೆ ವಾಪಸ್ ಹೋಗುತ್ತಿದ್ದೇನೆ ಎಂದು ಜಾನ್ವಿ ಕಪೂರ್ ಹೇಳಿರುವ ಸಂದೇಶಗಳು ಆ ಲೀಕ್ ಆದ ಚಾಟ್‌ನಲ್ಲಿವೆ.
ಚಿತ್ರದಲ್ಲಿ ಜಾನ್ವಿ ಕಪೂರ್ ಅವರು 'ಅಚ್ಚಿಯಮ್ಮ' ಎಂಬ ಪಾತ್ರವನ್ನು ನಿರ್ವಹಿಸಿದ್ದು, ಗಂಭೀರ ಸನ್ನಿವೇಶಗಳು ಅಥವಾ ಸಂಭಾಷಣೆಗಳಿಗೆ ಪ್ರಾಮುಖ್ಯತೆ ನೀಡುವ ಬದಲಿಗೆ ಚಿತ್ರಕ್ಕೆ ಮತ್ತಷ್ಟು ಮಸಾಲೆ ತುಂಬುವ ಉದ್ದೇಶದಿಂದ ಚಿತ್ರತಂಡ ಅವರ ಪಾತ್ರವನ್ನು ತೀರಾ ರಂಜನೀಯ ಹಾಗೂ ಆಕ್ಷೇಪಾರ್ಹ ಶೈಲಿಯಲ್ಲಿ ಬಿಂಬಿಸಿದೆ. ಅಷ್ಟೇ ಅಲ್ಲದೆ, ಸಿನಿಮಾದಲ್ಲಿ ವಿದ್ಯುತ್ ಕೈಕೊಟ್ಟ ಸಂದರ್ಭವೊಂದರಲ್ಲಿ ನಾಯಕ ನಟ ತನ್ನ ಪುರುಷ ಅಹಂ ಅಥವಾ ಉಗ್ರ ಮನೋಭಾವವನ್ನು ಪ್ರದರ್ಶಿಸುತ್ತಾ, ನಾಯಕಿಗೆ ಬಲವಂತವಾಗಿ ಮುತ್ತಿಕ್ಕುವ ಹಂತಕ್ಕೆ ಹೋಗುವಂತಹ ವಿವಾದಾತ್ಮಕ ದೃಶ್ಯಗಳನ್ನು ಕೂಡ ಒಳಗೊಂಡಿದೆ. ಸಾಕಷ್ಟು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ನಿರ್ದೇಶಕರು ಕ್ಷಮೆಯಾಚಿಸಿದ್ದು, ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದಿದ್ದಾರೆ, (ಏಜೆನ್ಸೀಸ್​).