ಭಾರತೀಯ ಸಿನಿಮಾರಂಗದ ಲೇಡಿ ಸೂಪರ್ಸ್ಟಾರ್ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇದೀಗ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಮದುವೆ! ಹೌದು, ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಹಂಚಿಕೊಂಡ ಒಂದಷ್ಟು ಫೋಟೋಗಳು ಇದೀಗ ಕುತೂಹಲಕ್ಕೆ ಕಾರಣವಾಗಿವೆ. ಮದುಮಗಳ ಲುಕ್ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿರುವುದರಿಂದ ಎಷ್ಟೋ ಮಂದಿ ನೆಟ್ಟಿಗರು, ಮದುವೆಯಾಯಿತೇ? ಎಂದು ಪ್ರಶ್ನಿಸಿದ್ದಾರೆ. ಆದರೆ, ಜಾಹ್ನವಿ ಹಂಚಿಕೊಂಡ ಫೋಟೋಗಳು ಖಾಸಗಿ ಕಂಪನಿಯೊಂದರ ಜಾಹೀರಾತಿನ ಫೋಟೋಗಳು. ಇನ್ನು ಕೆಲವರು ಜಾಹ್ನವಿ ಅವತಾರ ನೋಡಿ, ಥೇಟ್ ಶ್ರೀದೇವಿಯವರನ್ನೇ ನೋಡಿದಂತೆ ಭಾಸವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಮದುಮಗಳ ಅವತಾರದಲ್ಲಿ ಜಾಹ್ನವಿ ಹೇಗೆ ಕಾಣಿಸುತ್ತಾರೆ ಎಂಬುದಕ್ಕೆ ಇಲ್ಲಿ ಫೋಟೋಗಳಿವೆ ನೋಡಿ..