ಸಿನಿವಾಣಿ

ಗಣರಾಜ್ಯೋತ್ಸವದಂದು ಸೈನಿಕನಾಗಿ ಮಿಂಚಿದ ಅಪ್ಪು! 'ಜೇಮ್ಸ್' ವಿಶೇಷ ಪೋಸ್ಟರ್‌ ವೈರಲ್...

ಪವರ್​ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರ ಕೊನೆಯ 'ಜೇಮ್ಸ್' ಸಿನಿಮಾ 2022 ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಇಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಿರ್ಮಾಪಕರು ದಿವಂಗತ ಪವರ್ ಸ್ಟಾರ್ ಅವರ ಈ ಸಿನಿಮಾದ ಒಂದು ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ವಿಶೇಷ ಪೋಸ್ಟರ್‌ನಲ್ಲಿ, ಅಪ್ಪು ಅವರು ಯುದ್ಧದ ಹಿನ್ನೆಲೆಯಲ್ಲಿ ಸಿದ್ಧವಾದ ಸೈನಿಕನ ಲುಕ್​ನಲ್ಲಿ ಕಾಣುತ್ತಿದ್ದಾರೆ. ಈ ಪೋಸ್ಟರ್‌ ಕಂಡ ಸದ್ಯ ಅಪ್ಪು ಅಭಿಮಾನಿಗಳಿಗೆ ದಿಲ್ ಲುಷ್ ಆಗಿದ್ದು, ಕೆಲವೇ ಸೆಕೆಂಡ್​ಗಳಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂದಹಾಗೆ, ಜೇಮ್ಸ್ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ನಿರ್ಮಾಪಕರು ಸಿನಿಮಾದ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಒಂದೊಳ್ಳೆ ಪ್ಯಾಕ್​ಅಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಚೇತನ್ ಕುಮಾರ್ ಅವರು ನಿರ್ದೇಶಿಸಿದ, 'ಜೇಮ್ಸ್' ಸಿನಿಮಾ ಒಂದು ಆಕ್ಷನ್ ಎಂಟರ್‌ಟೈನರ್ ಆಗಿದೆ. ಚಿತ್ರದಲ್ಲಿ ನಟಿ ಪ್ರಿಯಾ ಆನಂದ್, ನಟ ಮೇಕಾ ಶ್ರೀಕಾಂತ್, ನಟಿ ಅನು ಪ್ರಭಾಕರ್ ಮುಖರ್ಜಿ ಮತ್ತು ಇತರರು ನಟಿಸಿದ್ದಾರೆ. ಇನ್ನು, ಅತಿಥಿ ಪಾತ್ರಗಳಲ್ಲಿ 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ಅವರ ಹಿರಿಯ ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವಣ್ಣ ಕೂಡ ನಟಿಸಿದ್ದಾರೆ. ಮೂವರು ಸಹೋದರರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನೋಡಲು ಸಿನಿಪ್ರೇಮಿಗಳು ಹಲವು ದಶಕಗಳಿಂದ ಕಾಯುತ್ತಿದ್ದು, 'ಜೇಮ್ಸ್' ಚಿತ್ರದ ಮೂಲಕ ಅಭಿಮಾನಿಗಳ ಕನಸು ನನಸಾಗುತ್ತಿದೆ.