ಸಿನಿವಾಣಿ

ಕನ್ನಡದಲ್ಲೊಂದು 'ಜಲ್ಲಿಕಟ್ಟು'; ಸದ್ಯದಲ್ಲೇ ಬಿಡುಗಡೆ ...

chetannadiger

ಬೆಂಗಳೂರು: ಮಲಯಾಳಂನಲ್ಲಿ ಮೂರು ವರ್ಷಗಳ ಹಿಂದೆ 'ಜಲ್ಲಿಕಟ್ಟು' ಎಂಬ ಚಿತ್ರದ ಬಗ್ಗೆ ನೆನಪಿರಬಹುದು. ಮಾನವ ಮತ್ತು ಪರಿಸರದ ಕುರಿತಾದ ಈ ಚಿತ್ರ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದಷ್ಟೇ ಅಲ್ಲ, ಆಸ್ಕರ್​ ಕಣದಲ್ಲೂ ಭಾರತವನ್ನು ಪ್ರತಿನಿಧಿಸಿತ್ತು.

ಈಗ ಕನ್ನಡದಲ್ಲೊಂದು 'ಜಲ್ಲಿಕಟ್ಟು' ಎಂಬ ಚಿತ್ರ ನಿರ್ಮಾಣವಾಗುತ್ತಿದೆ. ಹಾಗಂತ ಇದು ಮಲಯಾಳಂ ಚಿತ್ರದ ರೀಮೇಕ್​ ಅಲ್ಲ ಎಂಬುದು ಗೊತ್ತಿರಲಿ. ಶ್ರೀ ಬೀರೇಶ್ವರ ಫಿಲಂ ಮೇಕರ್ಸ್‌ ಲಾಂಛನದಡಿಯಲ್ಲಿ ಈ ಚಿತ್ರವನ್ನು ಸುರೇಶ್​ ನಿರ್ಮಿಸಿದ್ದಾರೆ. 'ಜಲ್ಲಿಕಟ್ಟು' ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ, 'ಎ' ಸರ್ಟಿಫಿಕೇಟ್ ನೀಡಿದೆ.

ಪ್ರಭು ಸೂರ್ಯ, ಶಿಲ್ಪಾ, ನಿಖಿತಾ, ಸುಚೇಂದ್ರ ಪ್ರಸಾದ್, ಶೋಭರಾಜ್, ಸಂಗೀತಾ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ವೀರೇಶ್ ಛಾಯಾಗ್ರಹಣ ಮಾಡಿದರೆ, ವಿಜಯ್ ಯಾರ್ಡ್ಲಿ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಆಲ್ವಿನ್​ ಫ್ರಾನ್ಸಿಸ್​ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರವು ದೀಪಾವಳಿ ಕೊಡುಗೆಯಾಗಿ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.