ಸಿನಿವಾಣಿ

ಅಕ್ಷಯ್​ ಕುಮಾರ್ ‘ಬಚ್ಚನ್ ಪಾಂಡೆ’ಗೆ ಜತೆಯಾದ ಜಾಕ್​ಲೀನ್​ ಫರ್ನಾಂಡೀಸ್

ಮುಂಬೈ: ಸಾಲು ಸಾಲು ಸಿನಿಮಾ ಘೋಷಣೆ ಮಾಡಿಕೊಂಡು ಶೂಟಿಂಗ್​ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವ ಬಾಲಿವುಡ್ ನಟ ಅಕ್ಷಯ್​ ಕುಮಾರ್​, ಈಗಾಗಲೇ ಲಾಕ್​ಡೌನ್​ ಅವಧಿಯಲ್ಲಿಯೇ ಬೆಲ್​ಬಾಟಂ ಸಿನಿಮಾ ಶೂಟಿಂಗ್​ ಮುಗಿಸಿದ್ದಾರೆ. ಅಷ್ಟೇ ಅಲ್ಲ ಪೃಥ್ವಿರಾಜ್​ ಚೌಹಾಣ್​ ಸಿನಿಮಾ ಕೆಲಸವೂ ನಡೆಯುತ್ತಿದೆ. ಇದೀಗ ಬಚ್ಚನ್ ಪಾಂಡೆ ಸಿನಿಮಾ ಸೆಟ್​ಗೆ ಅಕ್ಷಯ್​ ತೆರಳುತ್ತಿದ್ದಾರೆ. ಅಂದರೆ, ಜನವರಿ 6ರಿಂದ ಚಿತ್ರದ ಶೂಟಿಂಗ್​ ಆರಂಭವಾಗಲಿದೆ.

ಅಷ್ಟೇ ಅಲ್ಲ ಅಕ್ಷಯ್​ ಜತೆಗೆ ನಟಿಮಣಿಯರಾದ ಜಾಕ್​ಲೀನ್​ ಫರ್ನಾಂಡೀಸ್​ ಮತ್ತು ಕೃತಿ ಸನೋನ್​ ಸಹ ಹಾಜರಾಗಲಿದ್ದಾರೆ. ಈ ಮೊದಲು ಈ ಚಿತ್ರದಲ್ಲಿ ಕೇವಲ ಕೃತಿ ಮಾತ್ರ ಹೀರೋಯಿನ್​ ಎನ್ನಲಾಗಿತ್ತು. ಇದೀಗ ಜಾಕ್​ಲೀನ್​ ಸಹ ಸೇರಿಕೊಂಡಿದ್ದಾರೆ. ಈ ಮೂಲಕ ಚಿತ್ರದ ನಿರ್ಮಾಪಕ ಸಾಜಿದ್ ನಾದಿಯಾದ್ವಾಲಾ ಅವರ ಎಂಟು ಪ್ರಾಜೆಕ್ಟ್​ಗಳಲ್ಲಿ ಜಾಕ್​ಲೀನ್​ ನಟಿಸಿಸದಂತಾಗುತ್ತದೆ.

ಇತ್ತೀಚೆಗಷ್ಟೇ ಇದೇ ಚಿತ್ರಕ್ಕೆ ಅರ್ಷದ್ ವಾರ್ಸಿ ಸಹ ಎಂಟ್ರಿಕೊಟ್ಟಿದ್ದು, ಈ ಹಿಂದೆ ಬಾಲಿವುಡ್​ನಲ್ಲಿ ತೆರೆಕಂಡಿದ್ದ ಜಾಲಿ ಎಲ್​ಎಲ್​ಬಿ ಚಿತ್ರದ ಫ್ರಾಂಚೈಸಿಯಲ್ಲಿ ಈ ಇಬ್ಬರೂ ಬೇರೆ ಬೇರೆ ಭಾಗಗಳಲ್ಲಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ಬಚ್ಚನ್ ಪಾಂಡೆ ಸಿನಿಮಾ ಮೂಲಕ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಪಾತ್ರ ಎಂಥದ್ದು, ಸದ್ಯಕ್ಕೆ ಆ ಬಗ್ಗೆ ಮಾಹಿತಿ ನೀಡದ ತಂಡ, ಇನ್ನೇನು ಶೀಘ್ರದಲ್ಲಿ ಅವರ ಲುಕ್​ ಅನ್ನೂ ಬಿಡುಗಡೆ ಮಾಡಲಿದೆ. (ಏಜೆನ್ಸೀಸ್​)