ವಿದೇಶದಲ್ಲಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ ಅನಿರುದ್ಧ್ ರವಿಚಂದರ್! ವಧು ಯಾರು ಗೊತ್ತೇ? Anirudh Ravichander
- ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ
- ಖ್ಯಾತ ಉದ್ಯಮಿಯೊಬ್ಬರ ಮಗಳನ್ನು ಅನಿರುದ್ಧ್ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ
- ನಿಶ್ಚಿತಾರ್ಥ ಹಾಗೂ ವಿವಾಹದ ತಯಾರಿಗಳು ಗುಟ್ಟಾಗಿ ನಡೆಯುತ್ತಿವೆ ಎಂದು ಸುದ್ದಿ ಹರಿದಾಡುತ್ತಿದೆ
- ಅನಿರುದ್ಧ್ ಅಭಿಮಾನಿಗಳು ಖುಷಿಯಾಗಿದ್ದು ಅಧಿಕೃತ ಪ್ರಕಟಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ
Anirudh Ravichander : ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ.
ಖ್ಯಾತ ಉದ್ಯಮಿಯೊಬ್ಬರ ಮಗಳನ್ನು ಅನಿರುದ್ಧ್ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದ್ದು, ಈ ನಿಶ್ಚಿತಾರ್ಥ ಹಾಗೂ ವಿವಾಹದ ತಯಾರಿಗಳು ಗುಟ್ಟಾಗಿ ನಡೆಯುತ್ತಿವೆ ಎನ್ನಲಾಗಿದೆ. ಸದ್ಯ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳ ಬ್ಯಾಕ್-ಟು-ಬ್ಯಾಕ್ ಯಶಸ್ಸಿನ ಅಲೆಯಲ್ಲಿರುವ ರಾಕ್‌ಸ್ಟಾರ್ ಅನಿರುದ್ಧ್ ಅವರ ಈ ವೆಡ್ಡಿಂಗ್ ನ್ಯೂಸ್ ಕೇಳಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಅಧಿಕೃತ ಪ್ರಕಟಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಅಂದಹಾಗೆ, ಅನಿರುದ್ಧ್ ರವಿಚಂದರ್ ವರಿಸಲಿರುವ ವಧು ಕಾವ್ಯಾ ಮಾರನ್ ಎಂಬ ವದಂತಿ ಹರಿದಾಡುತ್ತಿದೆ. ಕಾವ್ಯಾ ಅವರು ಸನ್‌ರೈಸರ್ಸ್ ಹೈದರಾಬಾದ್ (SRH) ಐಪಿಎಲ್ ತಂಡದ ಒಡತಿ. ಇಬ್ಬರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿ ಭಾರಿ ಸಂಚಲನ ಸೃಷ್ಟಿಸಿದ್ದು, ಇಬ್ಬರ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಮಾಹಿತಿ ನಿಜವೇ ಅಥವಾ ಸುಳ್ಳೇ ಎಂಬ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಇದರ ನಡುವೆ ಈ ಹಿಂದೆ ಹರಿದಾಡಿದ್ದ ಇಂತಹದೇ ವದಂತಿಗಳಿಗೆ ಸ್ವತಃ ಅನಿರುದ್ಧ್ ಅವರೇ ನೇರವಾಗಿ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದ ಘಟನೆ ಕೂಡ ಈಗ ನೆನಪಾಗುತ್ತಿದೆ.
ಸದ್ಯ ವೈರಲ್ ಆಗುತ್ತಿರುವ ಕಾವ್ಯಾ ಮಾರನ್ ಅವರೊಂದಿಗಿನ ವೆಡ್ಡಿಂಗ್ ನ್ಯೂಸ್ ಅಧಿಕೃತವೇ ಎಂಬುದನ್ನು ತಿಳಿಯಲು ಇಬ್ಬರ ಕಡೆಯಿಂದಲೂ ಸ್ಪಷ್ಟನೆ ಹೊರಬೀಳಬೇಕಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ಜೋಡಿಯ ಮದುವೆ ಸುದ್ದಿ ಭಾರಿ ಟ್ರೆಂಡಿಂಗ್‌ನಲ್ಲಿದೆ. ಅದರಲ್ಲೂ ಕಳೆದ ಮೂರ್ನಾಲ್ಕು ದಿನಗಳಿಂದ ಈ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.
ಮುಂಬರುವ ನವೆಂಬರ್ ತಿಂಗಳಲ್ಲಿ ಸ್ಪೇನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಅತ್ಯಂತ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಜೋಡಿಯ ವಿವಾಹ ಮಹೋತ್ಸವ ಅತ್ಯಂತ ಗೌಪ್ಯವಾಗಿ ಜರುಗಲಿದೆ ಎಂದು ವರದಿಯಾಗಿದೆ. ತಮ್ಮ ವಿವಾಹದ ಸುದ್ದಿ ಟ್ರೆಂಡಿಂಗ್‌ನಲ್ಲಿದ್ದರೂ, ಅನಿರುದ್ಧ್ ಆಗಲಿ ಅಥವಾ ಕಾವ್ಯಾ ಆಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅಂದಹಾಗೆ, ತಮ್ಮ ಮದುವೆಯ ಕುರಿತು ಈ ಹಿಂದೆಯೂ ಹರಿದಾಡಿದ್ದ ಇಂತಹದೇ ವದಂತಿಗಳಿಗೆ ಅನಿರುದ್ಧ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯ ಮೂಲಕ ನೇರವಾಗಿಯೇ ಪ್ರತಿಕ್ರಿಯಿಸಿದ್ದರು. "ಮದುವೆಯಾ? ಲೋಲ್.. ಚಿಲ್ಲೌಟ್ ಗಯ್ಸ್. ದಯವಿಟ್ಟು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ," ಎಂದು ಬರೆಯುವ ಮೂಲಕ ಮದುವೆ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಹೀಗಿದ್ದರೂ ಸಹ ಈಗ ಮತ್ತೆ ಕಾವ್ಯಾ ಮಾರನ್ ಅವರೊಂದಿಗೆ ನವೆಂಬರ್ ಮದುವೆಯ ಗುಸುಗುಸು ಕೇಳಿಬರುತ್ತಿರುವುದರಿಂದ, ಈ ಬಾರಿ ಜೋಡಿಯು ಅಧಿಕೃತವಾಗಿ ಸ್ಪಷ್ಟನೆ ನೀಡುವ ಮೂಲಕ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ, (ಏಜೆನ್ಸೀಸ್).