ಸಿನಿವಾಣಿ

ಹೃತಿಕ್ ರೋಷನ್ ಹೊಸ ಗರ್ಲ್ ಫ್ರೆಂಡ್ ವಿಡಿಯೋ ವೈರಲ್!

ಮುಂಬೈ: ಹೃತಿಕ್ ರೋಷನ್ ಕಳೆದ ವಾರ ಬಾಲಿವುಡ್ ನಟಿ ಸಬಾ ಆಜಾದ್ ಅವರೊಂದಿಗೆ ಕಾಣಿಸಿಕೊಂಡಾಗ ಬಹುತೇಕ ಎಲ್ಲಾ ನೆಟ್ಟಿಗರು ಶಾಕ್ ಆಗಿದ್ದರು. ನಟ ಹೃತಿಕ್ ರೋಷನ್ ಅವರು ಸಬಾ ಕೈ ಹಿಡಿದುಕೊಂಡ ನಡೆದ ಪರಿ ಕಂಡು, ಬಹುಶಃ ಸಬಾ ಹೃತಿಕ್ ಅವರ ಹೊಸ ಗರ್ಲ್ ಫ್ರೆಂಡ್ ಎಂಬ ಮಾತುಗಳನ್ನಾಡ ತೊಡಗಿದರು.
ಒಂದೇ ವಾರದಲ್ಲಿ ಎರಡು ಬಾರಿ ನಟ ಹೃತಿಕ್ ರೋಷನ್ ಮತ್ತು ನಟಿ ಸಬಾ ಆಜಾದ್ ಒಟ್ಟಿಗೆ ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ನು, ಎರಡನೇ ಬಾರಿ ಇವರಿಬ್ಬರು ಒಟ್ಟಿಗೆ ಒಂದು ಹೋಟೆಲ್​ಗೆ ಹೋಗಿರುವ ಫೋಟೋಗಳು ಈಗಾಗಲೇ ವೈರಲ್ ಆಗಿವೆ.
ಆದರೆ, ಇದೀಗ ಹೃತಿಕ್ ಮತ್ತು ಸಬಾ ಎರಡನೇ ಬಾರಿ ಊಟಕ್ಕೆ ಎಂದು ಹೋಟೆಲ್ ಒಳಗಡೆ ಹೋಗಿದ್ದಾಗ, ಅಲ್ಲಿ ಒಟ್ಟಿಗೆ ಕೂತು ಊಟ ಮಾಡುತ್ತಿರುವುದು, ಇಬ್ಬರು ಮಾತಾಡಿಕೊಳ್ಳುತ್ತಿರುವುದು ಕಾಣಿಸಿಕೊಂಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 32 ವರ್ಷದ ನಟಿ ಸಬಾ ಆಜಾದ್ 2008 ರಲ್ಲಿ 'ದಿಲ್ ಕಬಡ್ಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
2011 ರಲ್ಲಿ 'ಮುಜ್ಸೆ ಫ್ರಾಂಡ್‌ಶಿಪ್ ಕರೋಗೆ' ಸಿನಿಮಾದ ಮೂಲಕ ಬಹಳಷ್ಟು ಫೇಮಸ್ ಆಗಿದ್ದರು. ಅಂದಹಾಗೆ, ಸಬಾ ಅವರು ನಟ ನಾಸಿರುದ್ದೀನ್ ಶಾ ಅವರ ಮಗ ಇಮಾದ್ ಜೊತೆ ಈ ಹಿಂದೆ ಸಂಬಂಧ ಹೊಂದಿದ್ದರು. ಅವರಿಬ್ಬರು 2013 ರಲ್ಲಿ ಡೇಟಿಂಗ್ ಪ್ರಾರಂಭಿಸಿ, ಏಳು ವರ್ಷಗಳ ಕಾಲ ಒಟ್ಟಿಗೆ ಇದ್ದರು. ನಂತರ, 2020ರಲ್ಲಿ ಬೇರಾದರು.