ಬೆಂಗಳೂರು: ನಿನ್ನೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರ ಉಗ್ರಾವತಾರವನ್ನು ಎಲ್ಲರೂ ನೋಡುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿರುವ ರಾಹುಲ್, 'ನಾನು ಇಂದಿರಾ ನಗರದ ಗೂಂಡಾ' ಎಂದು ಅವಾಜ್ ಹಾಕಿದ್ದರು.
ರಾಹುಲ್ರ ಈ ಹೇಳಿಕೆ ಸಕತ್ ವೈರಲ್ ಆಗಿದೆ. ಇದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಮೆಮ್ಗಳನ್ನು ಹರಿಬಿಡಲು, ಟ್ರೋಲ್ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದೀಗ ಇದನ್ನೇ ಬಳಸಿಕೊಂಡು ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮನ್ನೇ ತಾವು ಟ್ರೋಲ್ ಮಾಡಿಕೊಂಡಿದ್ದಾರೆ.
ಹೌದು, ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಬಾಲ್ಯದ ಚಂದದ ಫೋಟೋವನ್ನು ಹಂಚಿಕೊಂಡಿರುವ ದೀಪಿಕಾ ಪಡುಕೋಣೆ “Indiranagar ki gundi hoon main!” (ನಾನು ಇಂದಿರಾ ನಗರದ ಗೂಂಡಿ) ಎಂದು ರಾಹುಲ್ ದ್ರಾವಿಡ್ ಹೇಳಿಕೆಗೆ ಹೋಲಿಸಿಕೊಂಡು ಪೋಸ್ಟ್ ಹಾಕಿದ್ದಾರೆ. ಕರ್ನಾಟಕ ಮೂಲದವರೇ ಆಗಿರುವ ದೀಪಿಕಾ ವಿಶೇಷವಾಗಿ ಬೆಂಗಳೂರಿನೊಂದಿಗೆ ನಂಟು ಹೊಂದಿದ್ದಾರೆ.
ದೀಪಿಕಾ ಅವರ ಈ ಪೋಸ್ಟ್ಗೆ ಕೆಲವೇ ಗಂಟೆಗಳಲ್ಲಿ 15 ಲಕ್ಷ ಲೈಕ್ಗಳು ಬಂದಿವೆ. ಬಾಯಲ್ಲಿ ಬೆರಳಿಟ್ಟುಕೊಂಡಿರುವ ಬೇಬಿ ದೀಪಿಕಾರನ್ನು ನೆಟ್ಟಿಗರು ಸಕತ್ ಇಷ್ಟಪಟ್ಟಿದ್ದಾರೆ.