ನಟಿ ಮೀನಾ 
ಸಿನಿವಾಣಿ

ನಟಿ ಮೀನಾಗೆ ಈ ನಟನ ಮೇಲೆ ನಿಜವಾಗಿ ಲವ್​ ಆಗಿತ್ತಂತೆ! ಮದ್ವೆ ದಿನ ಕಣ್ಣೀರು ಸಹ ಹಾಕಿದ್ದರಂತೆ

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದು, 40 ವರ್ಷಗಳನ್ನು ಪೂರೈಸಿದ್ದಾರೆ. ಇದೀಗ ಮೀನಾ ಅವರು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಮೀನಾ ಅವರು ಭಾರತೀಯ ಚಿತ್ರರಂಗದಲ್ಲಿ ನಟರೊಬ್ಬರನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರಂತೆ ಮತ್ತು ನಟನ ಮದುವೆಯ ಸುದ್ದಿ ಕೇಳಿ ಆಘಾತವಾಗಿತ್ತು ಮತ್ತು ಕಣ್ಣೀರು ಕೂಡ ಹಾಕಿದ್ದೆ ಎಂದು ಮೀನಾ ಹೇಳಿಕೊಂಡಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರನ್ನು ನಾನು ಪ್ರೀತಿಸುತ್ತಿದ್ದೆ ಎಂದು ಮೀನಾ ಹೇಳಿದ್ದಾರೆ. ನನಗೆ ಹೃತಿಕ್‌ನಂತಹ ಗಂಡ ಬೇಕು ಎಂದು ನನ್ನ ತಾಯಿಗೆ ಹೇಳುತ್ತಿದ್ದೆ. ಅವರ ಮದುವೆಯ ದಿನದಂದು ನಾನು ತೀವ್ರವಾಗಿ ಎದೆಗುಂದಿದ್ದೆನ ಮತ್ತು ದುಃಖ ತಡಿಯಲಾಗದೇ ಕಣ್ಣೀರು ಸಹ ಹಾಕಿದ್ದೆ. ನನಗೆ ಆಗಿನ್ನೂ ಮದುವೆಯಾಗಿರಲಿಲ್ಲ ಎಂದು ತಮಿಳು ಚಾನೆಲ್ ‘ಸಿನಿ ಉಳಗಂ’ನಲ್ಲಿ ನಟಿ ಸುಹಾಸಿನಿ ನಡೆಸಿಕೊಡುತ್ತಿದ್ದ ಚಾಟ್ ಶೋನಲ್ಲಿ ಮೀನಾ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಮೀನಾ ಹೃತಿಕ್ ಅವರನ್ನು ಒಮ್ಮೆ ಭೇಟಿಯಾದ ಫೋಟೋವನ್ನು ಸುಹಾಸಿನಿ ಅವರು ಟಿವಿ ಪರದೆ ಮುಂದೆ ಹಂಚಿಕೊಂಡಾಗ ಮೀನಾ, ಈ ವಿಚಾರಗಳನ್ನು ಹೇಳಿಕೊಂಡರು.

ರಜನಿಕಾಂತ್ ಅವರ ಸೂಪರ್‌ಹಿಟ್ ಚಿತ್ರ ‘ಪಡೆಯಪ್ಪ’ದಲ್ಲಿ ರಮ್ಯಾ ಕೃಷ್ಣನ್ ನಿರ್ವಹಿಸಿದ ಖಳನಾಯಕಿ ಪಾತ್ರಕ್ಕೆ ಆರಂಭದಲ್ಲಿ ಮೀನಾ ಅವರನ್ನು ಪರಿಗಣಿಸಲಾಗಿತ್ತು ಎಂದು ಅವರೇ ಬಹಿರಂಗಪಡಿಸಿದರು. ಆದರೆ ಹೀರೋಯಿನ್ ಆಗಿ ಮಿಂಚುತ್ತಿರುವಾಗ ಆ ಸಂದರ್ಭದಲ್ಲಿ ನೆಗೆಟಿವ್ ಪಾತ್ರ ಮಾಡಿದರೆ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಅನ್ನೋ ಭಯದಿಂದ ಆ ಪಾತ್ರವನ್ನು ಒಪ್ಪಿಕೊಳ್ಳಬೇಡ ಎಂದು ತಾಯಿ ಹೇಳಿದ್ದರು ಎಂದು ಮೀನಾ ತಿಳಿಸಿದರು. ಆದರೆ ನಂತರ ಈ ನಿರ್ಧಾರಕ್ಕೆ ನಾನು ವಿಷಾದ ಕೂಡ ವ್ಯಕ್ತಪಡಿಸಿದ್ದೇನೆ ಎಂದರು.

ಅಂದಹಾಗೆ ಮೀನಾ ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)