ಸಿನಿವಾಣಿ

ಈತನೊಬ್ಬನಿಂದ ಇನ್ನೂ ಸಿಂಗಲ್​ ಆಗಿಯೇ ಉಳಿದಿದ್ದಾರಂತೆ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್!!

ಸಿನಿಮಾ ಹೀರೋಯಿನ್​ಗಳೆಂದರೆ ಸಹಜವಾಗಿ ಒಂದಷ್ಟು ವದಂತಿಗಳು, ಗಾಸಿಪ್​ಗಳು ಹಾರಾಡುತ್ತಲೇ ಇರುತ್ತವೆ. ಬಾಯ್​ಫ್ರೆಂಡ್​ ವಿಚಾರವಾಗಿ, ಡೇಟಿಂಗ್ ವಿಚಾರವಾಗಿ ಬಣ್ಣಬಣ್ಣದ ಸುದ್ದಿಗಳು ಸದ್ದು ಮಾಡುತ್ತಿರುತ್ತವೆ. ಅದೇ ರೀತಿ ಬಹುಭಾಷಾ ನಟಿ ರಾಕುಲ್​ ಪ್ರೀತ್​ಗೂ ಅಂಥಹ ಒಂದಷ್ಟು ವದಂತಿಗಳು ಅಂಟಿಕೊಂಡಿದ್ದವು. ರಾಣಾ ದಗ್ಗುಬಾಟಿ ಜತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಯನ್ನು ಟಾಲಿವುಡ್​ ತುಂಬೆಲ್ಲ ಹಬ್ಬಿಸಲಾಗಿತ್ತು. ಬಳಿಕ ಇಬ್ಬರೂ ಮೌನ ಮುರಿದು ನಾವಿಬ್ಬರೂ ಸ್ನೇಹಿತರೆಂದು ಹೇಳಿಕೊಂಡಿದ್ದರು. ಹೀಗಿರುವಾಗ ಪದೇಪದೆ ಸಂದರ್ಶನಗಳಲ್ಲಿ ನಾನಿನ್ನೂ ಸಿಂಗಲ್​ ಎಂದು ಹೇಳಿಕೆ ಕೊಡುತ್ತಲೇ ಬಂದಿದ್ದಾರೆ ರಾಕುಲ್​. ಆ ಸಿಂಗಲ್​ ಹೇಳಿಕೆಗೆ ಕಾರಣ ರಾಕುಲ್​ ಸಹೋದರ!
ಹೌದು, ಸಹೋದರ ಅಮನ್​ ಪ್ರೀತ್​ ಸಿಂಗ್​ನಿಂದಾಗಿಯೇ ರಾಕುಲ್​ ಇನ್ನೂ ಸಿಂಗಲ್​ ಆಗಿ ಉಳಿದಿದ್ದಾರಂತೆ. ಅದನ್ನು ಸ್ವತಃ ರಾಕುಲ್​ ಹೇಳಿಕೊಂಡಿದ್ದಾರೆ. ‘ನಾನು ಶಾಲೆಯಲ್ಲಿ ಯಾರಾದರೂ ಹುಡುಗರೊಂದಿಗೆ ಮಾತನಾಡಲು ಶುರು ಮಾಡಿದರೆ, ಅದನ್ನು ನೋಡಿದ ಅಮನ್​ ಮನೆಯಲ್ಲಿ ಅಪ್ಪ, ಅಮ್ಮನಿಗೆ ಹೇಳುತ್ತಿದ್ದ. ಅಷ್ಟೇ ಅಲ್ಲ ಊಟದ ತಟ್ಟೆ ಕೈಯಲ್ಲಿ ಹಿಡಿದು ನಿಂತಾಗ, ಹುಡುಗರಿಗೆ ಊಟ ಮಾಡಿಸುತ್ತಿದ್ದೆ ಅಂತಲೂ ಹೇಳಿದ್ದ. ಹಾಗಾಗಿ ನಾನು ಏನೇ ಮಾಡಿದರೂ ಅದು ಅಮನ್​ಗೆ ಗೊತ್ತಾಗುತ್ತದೆ. ಆತನಿಂದಲೇ ನಾನು ಯಾರ ಜತೆಗೂ ಟೇಡಿಂಗ್ ಮಾಡುತ್ತಿಲ್ಲ’ ಎಂದಿದ್ದಾರೆ.
ಸದ್ಯ ಸಿನಿಮಾ ವಿಚಾರಕ್ಕೆ ಬಂದರೆ, ಕಮಲ್​ ಹಾಸನ್ ಜತೆಗೆ ಇಂಡಿಯನ್​ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಂದ್ರಶೇಖರ್​ ಎಳತಿ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ನಿತಿನ್​ಗೆ ನಾಯಕಿಯಾಗಲಿದ್ದಾರೆ. ಶಿವಕಾರ್ತಿಕೇಯನ್​ ಚಿತ್ರದಲ್ಲೂ ನಟಿಸಲಿದ್ದಾರೆ. (ಏಜೆನ್ಸೀಸ್​)