ಬೆಂಗಳೂರು: ಬಿಗ್ಬಾಸ್ ಮನೆಯಿಂದ ಮೂರನೇ ವಾರ ಎಲಿಮಿನೇಟ್ ಆಗಿರುವ ಕಿರುತೆರೆ ನಟಿ ಗೀತಾ ಭಟ್ ಸಹ ಸ್ಪರ್ಧಿಗಳಾದ ರಾಜೀವ್ ಮತ್ತು ಶಮಂತ್ (ಬ್ರೋ ಗೌಡ) ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ರಾಜೀವ್ ಚತುರ ಆಟಗಾರ
ನನ್ನ ಪ್ರಕಾರ ರಾಜೀವ್ ಬಹಳ ಬುದ್ಧಿವಂತೆ ಆಟವಾಡುತ್ತಿದ್ದಾರೆ. ಆಕ್ರಮಣಕಾರಿ ವ್ಯಕ್ತಿತ್ವವನ್ನು ಹೊರತುಪಡಿಸಿದರೆ, ರಾಜೀವ್ ಒಳ್ಳೆಯ ವ್ಯಕ್ತಿ. ಅವರು ಎಲ್ಲರೊಂದಿಗೆ ಬೆರೆಯುತ್ತಾರೆ. ಆದರೆ, ಮನೆಯೊಳಗೆ ಆಟಕ್ಕಾಗಿ ತನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡಿರುವಂತೆ ಕಾಣುತ್ತಾರೆಂದು ಹೇಳಿದ್ದಾರೆ.
ಇದನ್ನೂ ಓದಿರಿ: ಸಿಡಿ ಕೇಸ್: ಪೊಲೀಸರ ಮುಂದೆ ಬಿಕ್ಕಿಬಿಕ್ಕಿ ಅಳುತ್ತಲೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುವತಿಯ ಪ್ರಿಯಕರ!
ನನ್ನ ಬದಲು ಶಮಂತ್ ಹೋಗಬೇಕಿತ್ತು
ಇಂದು ನನ್ನ ಬದಲು ಶಮಂತ್ ಅವರು ಹೊರಹೋಗಬೇಕಿತ್ತೆಂದು ನಾನು ಭಾವಿಸುತ್ತೇನೆ. ನಾನು ಈ ವಾರವೇ ಹೊರಹೋಗುತ್ತೇನೆಂದು ಭಾವಿಸಿರಲಿಲ್ಲ. ಜನರೊಂದಿಗೆ ಬೆರೆಯವುದರಲ್ಲಿ ಮತ್ತು ಪ್ರದರ್ಶನದಲ್ಲಿ ಶಮಂತ್ ತುಂಬಾ ದರ್ಬಲರಾಗಿದ್ದಾರೆ. ಸ್ಪರ್ಧಿಗಳಿಗಿಂತ ಕ್ಯಾಮೆರಾ ಮುಂದೆಯೇ ಹೆಚ್ಚು ಮಾತನಾಡುತ್ತಾರೆ. ಅವರು ಹೊರಬರಬೇಕಿತ್ತು. ಆದರೆ, ಅವರು ಮತ್ತೊಂದು ಅವಕಾಶ ಪಡೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆಂದರು.
ನಿಧಿ ಸುಬ್ಬಯ್ಯ, ವಿಶ್ವನಾಥ್ ಹಾವೇರಿ, ಶಮಂತ್ (ಬ್ರೋ ಗೌಡ), ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಅರವಿಂದ್ ಕೆ.ಪಿ. ಮತ್ತು ಪ್ರಶಾಂತ್ ಸಂಬರಗಿ ಜತೆ ಗೀತಾ ಸಹ ನಾಮಿನೇಟ್ ಆಗಿದ್ದರು. ಆದರೆ, ಅತಿ ಕಡಿಮೆ ವೋಟ್ ಪಡೆದು ಮನೆಯಿಂದ ಹೊರಬಂದಿದ್ದಾರೆ. ಗೀತಾ ಬಿಗ್ಬಾಸ್ ಮನೆಯಲ್ಲಿ ಒಟ್ಟು 22 ದಿನಗಳನ್ನು ಕಳೆದಿದ್ದಾರೆ.