ಇತ್ತೀಚೆಗಷ್ಟೇ ಒಂದಷ್ಟು ನಟ, ನಟಿಯರು ಮುಂಬೈನಲ್ಲಿ ತಾವು ವಾಸವಿರುವ ಮನೆಯ ಕರೆಂಟ್ ಬಿಲ್ ನೋಡಿ ದಂಗಾಗಿದ್ದರು. ಅದೇ ರೀತಿ ಕಂಗನಾ 40 ಕೋಟಿ ಬೆಲೆಯ ಬೃಹತ್ ಬಂಗಲೆ ಖರೀದಿಸಿ ಪರೊಕ್ಷವಾಗಿ ಹೃತಿಕ್ ರೋಷನ್ಗೆ ಟಾಂಗ್ ಕೊಟ್ಟಿದ್ದರು. ‘ನಾನು ಸ್ವಂತ ಕಟ್ಟಡ ಖರೀದಿಸಿದೆ. ಹೃತಿಕ್ ರೋಷನ್ ಈಗಲೂ ಬಾಡಿಗೆ ಮನೆಯಲ್ಲಿದ್ದಾರೆಂದು’ ಹೇಳಿಕೆ ಕೊಟ್ಟಿದ್ದರು. ಇದೀಗ ಹೃತಿಕ್ ಕಡೆಯಿಂದ ಅಚ್ಚರಿಯ ಸುದ್ದಿ ಬಂದಿದೆ. ಅದನ್ನು ಕೇಳಿದರೆ, ನಿಜಕ್ಕೂ ನೀವು ಕೊಂಚ ಕಾಲ ಸುಧಾರಿಸಿಕೊಳ್ಳಬೇಕು!
ಇದನ್ನೂ ಓದಿ: ಆಕೆ ಸೂಪರ್ಸ್ಟಾರ್; ಆತ ಸಾಮಾನ್ಯ ನಿರೂಪಕ …
ಹೌದು, ಮುಂಬೈನ್ ಜುಹು ಪ್ರದೇಶದಲ್ಲಿರುವ ರೇಣು ನೀರಜ್ ಕೊಚ್ಚರ್ ಅವರ ಪ್ಲಾಟ್ನ್ನು ಇತ್ತೀಚೆಗಷ್ಟೆ ಬಾಡಿಗೆ ಪಡೆದುಕೊಂಡಿದ್ದಾರೆ ಹೃತಿಕ್. ಜೂನ್ 18ರಂದು ಅದರ ನೋಂದಣಿ ಕಾರ್ಯ ಮುಗಿಸಿದ್ದಾರೆ. ಆಗ ಗೊತ್ತಾದ ಸುದ್ದಿ ಏನೆಂದರೆ, ಒಟ್ಟು 8 ಲಕ್ಷ 25 ಸಾವಿರ ಮೊತ್ತವನ್ನು ಬಾಡಿಗೆ ರೂಪದಲ್ಲಿ ಪ್ರತಿ ತಿಂಗಳು ನೀಡುತ್ತಿದ್ದಾರೆ. ಏಪ್ರಿಲ್ 1ರ 2020ರಿಂದ, 2025ರ ಮಾರ್ಚ್ 31ರ ವರೆಗೆ ಒಡಂಬಡಿಕೆ ಆಗಿದೆ.
ಇದನ್ನೂ ಓದಿ: ಕಾಮೇಗೌಡರ ಕುರಿತು ಚಿತ್ರ ಮಾಡ್ತಿದ್ದಾರೆ ದಯಾಳ್ …
2023ರ ವರೆಗೆ ಪ್ರತಿ ತಿಂಗಳು 8.25 ಲಕ್ಷ ನೀಡಿದರೆ, 2024ರಿಂದ 2025ರ ವರೆಗೆ ಪ್ರತಿ ತಿಂಗಳು 9 ಲಕ್ಷ ಪಾವತಿಸಲಿದ್ದಾರೆ. ಇದೆಲ್ಲದರ ಅಂದಾಜು ಮೊತ್ತವನ್ನು ಲೆಕ್ಕಹಾಕುವುದಾದರೆ, ಬರೋಬ್ಬರಿ ಐದು ವರ್ಷಕ್ಕೆ 5 ಕೋಟಿ 40 ಲಕ್ಷ ಮೊತ್ತವನ್ನು ಬಾಡಿಗೆ ರೂಪದಲ್ಲಿ ನೀಡಲಿದ್ದಾರೆ. ಇದೇ ಅಪಾರ್ಟ್ಮೆಂಟ್ನಲ್ಲಿ ಅಕ್ಷಯ್ ಕುಮಾರ್ ಸಹ ವಾಸವಾಗಿದ್ದಾರೆ. ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಚಾಲನೆ ನೀಡಿದಾಗ, ಈ ಇಬ್ಬರು ಕಲಾವಿದರು, ಒಂದೇ ಫೋಟೋ ಫ್ರೇಮ್ಗೆ ಸಿಕ್ಕಿದ್ದರು.