ಸಿನಿವಾಣಿ

ಸೆಲಿಬ್ರಿಟಿಗಳ ಸೋಷಿಯಲ್​ ಮೀಡಿಯಾದ ಒಂದು ಪೋಸ್ಟ್​ಗೆ ಸಿಗುವ ಹಣವೆಷ್ಟು?

rameshmysuru

ನವದೆಹಲಿ: ಕೆಲವರಿಗೆ ಸೋಷಿಯಲ್ ಮೀಡಿಯಾ ಎಂದರೆ ಕೇವಲ ಟೈಂಪಾಸ್. ಆದರೆ, ಎಷ್ಟೋ ಜನ ಸೋಷಿಯಲ್ ಮೀಡಿಯಾದಿಂದಲೇ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ ಎಂಬ ವಿಷಯ ಹಲವರಿಗೆ ಗೊತ್ತಿರಲಿಕ್ಕಿಲ್ಲ.

ಹೌದು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಒಂದು ಪೋಸ್ಟ್ ಹಾಕಿದರೆ, ಅದಕ್ಕೆ ಕೋಟ್ಯಂತರ ರೂಪಾಯಿ ಅವರಿಗೆ ಸಿಗುತ್ತದೆ. ಅದಕ್ಕೆ ಕಾರಣ, ಅವರಿಗಿರುವ ಹಿಂಬಾಲಕರು. ಒಬ್ಬ ಸೆಲೆಬ್ರಿಟಿಗೆ ಹಿಂಬಾಲಕರ ಸಂಖ್ಯೆ ಹೆಚ್ಚಾದಂತೆ ಪೋಸ್ಟ್​ಗೆ ದುಡ್ಡು ಸಿಗುತ್ತದೆ. ಉದಾಹರಣೆಗೆ, ಇನ್​ಸ್ಟಾ ಗ್ರಾಂನಲ್ಲಿ ಪ್ರಿಯಾಂಕಾ ಚೋಪ್ರಾ ಒಂದು ಪೋಸ್ಟ್ ಹಾಕಿದರೆ, ಅವರಿಗೆ ಎಷ್ಟು ದುಡ್ಡು ಸಿಗುತ್ತದೆ ಗೊತ್ತಾ? 2.16 ಕೋಟಿ ರೂಪಾಯಿಗಳು. ಅದಕ್ಕೆ ಕಾರಣ ಜಗತ್ತಿನಾದ್ಯಂತ ಪ್ರಿಯಾಂಕಾಗೆ 56 ಮಿಲಿಯನ್ ಹಿಂಬಾಲಕರಿದ್ದಾರೆ ಎಂಬುದು ಗಮನಾರ್ಹ.

ಹೀಗೆ, ಪೋಸ್ಟ್ ಹಾಕಿ ಕೋಟಿ ಕೋಟಿ ದುಡ್ಡು ಬಾಚುವ ಸೆಲೆಬ್ರಿಟಿಯ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿ ನಿಲ್ಲುತ್ತಾರೆ ಪ್ರಿಯಾಕಾ ಚೋಪ್ರಾ. ಹಾಗಾದರೆ, ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಯಾರ ಹೆಸರಿದೆ ಎಂಬ ಪ್ರಶ್ನೆ ಬರುವುದು ಸಹಜ. ಹಾಲಿವುಡ್ ನಟ ಡಾನ್ ಜಾನ್ಸನ್ ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದು, ಅವರು ಹಾಕುವ ಒಂದು ಪೋಸ್ಟ್ ಗೆ 7.16 ಕೋಟಿ ರೂ. ಸಂಪಾದಿಸುತ್ತಾರಂತೆ.