ಸಿನಿವಾಣಿ

ಎಷ್ಟು ಬಾರಿ ಸರಸವಾಡಿದ್ದೀರಿ ಎಂದು ಕೇಳಿದ ನೆಟ್ಟಿಗನಿಗೆ ಖಡಕ್​​​ ಉತ್ತರ ನೀಡಿದ ಖ್ಯಾತ ಯೂಟ್ಯೂಬರ್​!

ಹೈದರಾಬಾದ್​: ಯೂಟ್ಯೂಬ್ ವಿಡಿಯೋ ಮತ್ತು ಬಿಗ್​ಬಾಸ್ ಶೋ ಮೂಲಕ ಸರಯು ಟಾಲಿವುಡ್​ನಲ್ಲಿ ಅನಿರೀಕ್ಷಿತವಾಗಿ ಜನಪ್ರಿಯತೆ ಗಳಿಸಿದರು. ಬಿಗ್​​​ಬಾಸ್​ ಶೋನಲ್ಲಿ ಕೇವಲ ಒಂದು ವಾರ ಇದ್ದ ಸರಯು, ಕಡಿಮೆ ಸಮಯದಲ್ಲೇ ಜನಮನ್ನಣೆ ಗಳಿಸಿದರು. ಸದ್ಯ ಸರಯು ಅವರು ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಆಗಿದ್ದಾರೆ.

ಇನ್ನು ಸೆಲೆಬ್ರಿಟಿಗಳು ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಆಗಾಗ ಇನ್​ಸ್ಟಾಗ್ರಾಂ ಅಥವಾ ಫೇಸ್​ಬುಕ್ ಮೂಲಕ​ ಅಭಿಮಾನಿಗಳ ಜತೆ ಸಂವಾದ ನಡೆಸುತ್ತಿರುತ್ತಾರೆ. ಈ ವೇಳೆ ಕೆಲ ಅಭಿಮಾನಿಗಳು ಸಹಜವಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಸಭ್ಯವಾಗಿ ನಡೆದುಕೊಂಡರೆ ಕೆಲ ನೆಟ್ಟಿಗರು ಅಶ್ಲೀಲ ಪ್ರಶ್ನೆಗಳನ್ನು ಕೇಳುವ ಮೂಲಕ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ.

ಅದೇ ರೀತಿ ನೆಟ್ಟಿಗನೊಬ್ಬ ನೀವು ಎಷ್ಟು ಬಾರಿ ಸೆಕ್ಸ್​ ಮಾಡಿದ್ದೀರಿ ಎಂದು ಇತ್ತೀಚೆಗೆ ಸರಯು ಅವರನ್ನು ಇನ್​ಸ್ಟಾಗ್ರಾಂನಲ್ಲಿ ಕೇಳಿದ್ದ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇಂತಹ ಪ್ರಶ್ನೆಗೆ ಉತ್ತರಿಸಲು ಬಯಸುವುದಿಲ್ಲ. ಆದರೆ, ಇದಕ್ಕೆ ಉತ್ತರಿಸಿದ ಸರಯು, ಬಾಬು ನೀವು ಈ ಪ್ರಶ್ನೆಗೆ ಏನು ಉತ್ತರ ನೀಡುತ್ತೀರಿ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಸರಯು ಅವರ ಈ ಪ್ರತಿಕ್ರಿಯೆ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಸರಯು ಅವರ ಪೂರ್ಣ ಹೆಸರು ಸರಯು ರಾಯ್. ತಮ್ಮ ವೃತ್ತಿಜೀವನದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. 18 ಪೇಜಸ್​ ಸಿನಿಮಾದಲ್ಲಿ ನಟ ನಿಖಿಲ್ ಅವರ ಫ್ರೆಂಡ್​ ಪಾತ್ರವು ಸರಯುಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಬೋಲ್ಡ್ ಪಾತ್ರಗಳಲ್ಲಿ ನಟಿಸದೇ ಇದ್ದಿದ್ದರೆ ಅವರ ಕೆರಿಯರ್ ಇನ್ನಷ್ಟು ಚೇತರಿಸಿಕೊಳ್ಳುತ್ತಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸಿದ್ದು ಅವರಿಗೆ ಸ್ವಲ್ಪ ಮೈನಸ್ ಆಗಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯ.

ವೃತ್ತಿಜೀವನದ ಆರಂಭದ ದಿನಗಳಲ್ಲಿ ಸರಯು ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದರು. ಕೆಲ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದರೂ ಆ ಧಾರಾವಾಹಿಗಳಿಂದ ನಿರೀಕ್ಷಿತ ಮನ್ನಣೆ ಸಿಗಲಿಲ್ಲ. ವೃತ್ತಿ ಬದುಕಿನಲ್ಲಿ ಸರಯು ಇನ್ನಷ್ಟು ಬೆಳೆಯಬೇಕು ಎಂಬುದು ಅಭಿಮಾನಿಗಳ ಆಶಯ. ಸರಯೂ ಅವರನ್ನು ಮೆಚ್ಚುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರಯು ರಾಯ್ ಅವರ ಯಶಸ್ಸಿನ ಪ್ರಮಾಣ ಇನ್ನೂ ಹೆಚ್ಚಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. (ಏಜೆನ್ಸೀಸ್)