ಸಿನಿವಾಣಿ

ಟಾಕ್ ಇದೆ, ಕಲೆಕ್ಷನ್ ಇಲ್ಲ: ಕಲಿವೀರನ ಕಳವಳ

Webdesk - Ravikanth

ಬೆಂಗಳೂರು: ಎರಡನೇ ಲಾಕ್​ಡೌನ್ ನಂತರ ಬಿಡುಗಡೆಯಾದ ಮೊದಲ ಹೊಸ ಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ‘ಕಲಿವೀರ’ ಆಗಸ್ಟ್ 6ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ಮೆಚ್ಚುಗೆ ಸಿಕ್ಕರೂ, ಜನ ಮಾತ್ರ ಚಿತ್ರಮಂದಿರದತ್ತ ಬರುತ್ತಿಲ್ಲವಂತೆ, ಕಲೆಕ್ಷನ್ ಆಗುತ್ತಿಲ್ಲವಂತೆ. ಹಾಗಂತ ತಂಡದವರೇ ಹೇಳಿಕೊಂಡಿದ್ದಾರೆ. ‘ಚಿತ್ರದ ಬಗ್ಗೆ ಜನ ಒಳ್ಳೆಯ ಮಾತಾಡುತ್ತಿದ್ದಾರೆ. ಆದರೆ, ಕಲೆಕ್ಷನ್ ಕಡಿಮೆ. ಬಿಡುಗಡೆ ಮಾಡಬೇಡಿ ಎಂದು ಬಹಳಷ್ಟು ಜನ ಹೇಳಿದ್ದರು. ನವೆಂಬರ್​ನಲ್ಲಿ ಮತ್ತೆ ಬರುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಅವಿರಾಮ್.

ಚಿತ್ರಕ್ಕೆ ಜನ ಬರದಿರುವುದಕ್ಕೆ ಪೈರಸಿ ಸಹ ಒಂದು ಕಾರಣ ಎನ್ನುವ ಅವರು, ‘ಕೆಲವೆಡೆ 10 ರೂ.ಗಳಿಗೆ ಮೊಬೈಲ್​ಫೋನ್​​ಗೆ ಚಿತ್ರ ಹಾಕಿಕೊಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು. ಇನ್ನು, ನಾಯಕ ಏಕಲವ್ಯ ಮಾತನಾಡಿ, ‘ಜನರಿಗೆ ಚಿತ್ರವನ್ನು ತಲುಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಚಾರ ಮಾಡಿದ್ದೇವೆ. ಮೆಚ್ಚುಗೆ ಮಾತೂ ಸಿಕ್ಕಿದೆ. ಖುದ್ದು ಎರಡು ಸಾವಿರ ಪೋಸ್ಟರ್​ಗಳನ್ನು ಅಂಟಿಸಿದ್ದೇನೆ’ ಎಂಬುದು ಅವರ ಮಾತು.