ಸಿನಿವಾಣಿ

ರಕ್ಷಾ ಬಂಧನದಂದೇ ಭರ್ಜರಿ ಗಳಿಕೆ ಕಂಡ 'ಗದರ್​ 2'; ಬಾಕ್ಸ್​ ಆಫೀಸ್​ನಲ್ಲಿ ಸನ್ನಿ ಡಿಯೋಲ್​ ಕಮಾಲ್​!

ಮುಂಬೈ: ಆಗಸ್ಟ್​ 11 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ನಟ ಸನ್ನಿ ಡಿಯೋಲ್​ ನಟನೆಯ 'ಗದರ್​ 2' ಚಿತ್ರ ಇದೀಗ ಬಾಕ್ಸ್​ ಆಫೀಸ್​ ಆಳುತ್ತಿದ್ದು, ಹಿಂದಿನ ಚಿತ್ರಗಳು ಬರೆದಿದ್ದ ದಾಖಲೆಗಳನ್ನು ಉಡೀಸ್​ ಮಾಡುವಲ್ಲಿ ಯಶಸ್ವಿಯಾಗಿದೆ. ಇದರೊಟ್ಟಿಗೆ ಬುಧವಾರ ರಕ್ಷಾ ಬಂಧನ ಹಬ್ಬದಂದು ಚಿತ್ರ ಬರೋಬ್ಬರಿ 8.6 ಕೋಟಿ ರೂ. ಗಳಿಕೆ ಕಂಡಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.

ರಕ್ಷಾ ಬಂಧನ ಹಬ್ಬವನ್ನು ಬುಧವಾರ (ಆಗಸ್ಟ್​ 30) ದೇಶಾದ್ಯಂತ ಆಚರಿಸಲಾಯಿತು. ಈ ಸಮಯದಲ್ಲಿ ಸಿನಿಪ್ರೇಕ್ಷಕರ ಗಮನಸೆಳೆಯಲು ಚಿತ್ರತಂಡ ಘೋಷಿಸಿದ "ಬೈ 2 ಗೆಟ್ 2" ಟಿಕೆಟ್​ ಆಫರ್ ಗಲ್ಲಾಪೆಟ್ಟಿಗೆಯಲ್ಲಿ ಅಧಿಕ ಗಳಿಕೆ ಮಾಡಲು ಸಹಕರಿಸಿದೆ. ಕೇವಲ ಒಂದೇ ದಿನ ಸನ್ನಿ ಡಿಯೋಲ್ ಅಭಿನಯದ ಚಿತ್ರವು 8.6 ಕೋಟಿ ರೂ. ಬೃಹತ್ ಮೊತ್ತವನ್ನು ಸಂಗ್ರಹಿಸಿದೆ.

ಬಿಡುಗಡೆಗೊಂಡ ಮೊದಲ ದಿನದಿಂದಲೂ ಇಲ್ಲಿಯವರೆಗೆ 'ಗದರ್ 2' ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 474 ಕೋಟಿ ರೂ. ಗಳಿಕೆಯನ್ನು ಕಂಡಿದೆ ಎಂದು ವರದಿ ಮಾಹಿತಿ ನೀಡಿದೆ.

ಸದ್ಯ ಹಿಂದಿ ಭಾಷೆಯ ಚಿತ್ರಗಳಲ್ಲಿ 'ಬಾಹುಬಲಿ 2' ಮತ್ತು 'ಪಠಾಣ್' ನಂತರ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ. ಶಾರೂಖ್​ ಖಾನ್​ ಅಭಿನಯದ ಪಠಾಣ್‌ ಚಿತ್ರದ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು 'ಗದರ್​ 2' 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಬೇಕಿದೆ,(ಏಜೆನ್ಸೀಸ್).