ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ 'ಫ್ಯಾಮಿಲಿ ಪ್ಯಾಕ್' ನಂತರ ನಾಯಕ ಲಿಖಿತ್ ಈಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದ ಮೂಲಕ ಬಂದಿದ್ದಾರೆ. ಅದೇ 'ಫುಲ್ ಮೀಲ್ಸ್'. ಈ ಚಿತ್ರಕ್ಕೆ ಅವರು ನಾಯಕನಷ್ಟೇ ಅಲ್ಲ, ನಿರ್ಮಾಪಕರೂ ಹೌದು.
ಈಗಾಗಲೇ 'ಫುಲ್ ಮೀಲ್ಸ್' ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಚಿತ್ರೀಕರಣ ಪೂರ್ಣವಾಗಲಿದೆ. ಈ ಚಿತ್ರಕ್ಕೆ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾಜಿ ಪತ್ನಿ-ಸಹೋದರನ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ
'ಫುಲ್ ಮೀಲ್ಸ್' ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧು ಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ನಟಿಸಿದ್ದು, ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.