ಬೆಂಗಳೂರು:
ದೂರದ ದುಬೈನಲ್ಲಿ ನೆಲೆಸಿರುವ ಮೂಲತ@ ಮೈಸೂರಿನ ಗಾಯಕಿ ಈಶಾನಿ. 17 ಇಂಗ್ಲೀಷ್ ಆಲ್ಬಂ ಹಾಡುಗಳ ಜತೆ ಎರಡು ಕನ್ನಡ ಆಲ್ಬಂ ಸಾಂಗ್ ಹಾಡಿರುವ ಅವರು ಇತ್ತೀಚೆಗಷ್ಟೆ ಮೂರನೇ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ ಮಾಡಿದರು. ಈ ಹಿಂದೆ "ರೈಟರ್' ಮತ್ತು "ಊರ್ಮಿಳ' ಹಾಡುಗಳಿಗೆ ಧ್ವನಿಯಾಗಿದ್ದ ಈಶಾನಿ, ಇದೀಗ "ಫ್ರೀಡಮ್' ಸಾಂಗ್ ಮೂಲಕ ಮತ್ತೆ ವಾಪಸ್ಸಾಗಿದ್ದಾರೆ.
"ನಾನು ಮೈಸೂರಿನವಳು, ದುಬೈನಲ್ಲಿ ನೆಲೆಸಿದ್ದೇನೆ. ಅಪ್ಪ, ಅಮ್ಮ ಇಬ್ಬರೂ ಕರ್ನಾಟಕದಲ್ಲೇ ಇದ್ದಾರೆ. ಅವರಿಗೆ ನಾನು ಕನ್ನಡದಲ್ಲಿ ಹಾಡಬೇಕು ಎಂಬ ಆಸೆಯಿತ್ತು. ನನಗೂ ಕನ್ನಡದಲ್ಲಿ ಹಾಡುವ ಬಯಕೆಯಿತ್ತು. ಅದರಂತೆ ಕನ್ನಡದಲ್ಲಿ ಆಲ್ಬಂ ಹಾಡುಗಳನ್ನು ಮಾಡಿದೆ. ಎಲ್ಲೆಡೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಈಗ ಕನ್ನಡ ಚಿತ್ರಗಳಲ್ಲಿ ನಟಿಸಬೇಕು, ಹಾಡಬೇಕು ಅಂತ ಆಸೆಯಿದೆ. ಹೀಗಾಗಿ ಸಂಪೂರ್ಣ ಸಮಯವನ್ನು ಸಂಗೀತಕ್ಕಾಗಿ ಮೀಸಲಿಟ್ಟಿದ್ದೇನೆ' ಎಂದು ಹೇಳಿಕೊಂಡರು.
ವಾಸುಕಿ ವೈಭವ್ ಈ ಹಾಡಿಗೆ ಸಾಹಿತ್ಯ ರಚಿಸಿ, ಸಂಗೀತ ನೀಡಿದ್ದಾರೆ. "ಫ್ರೀಡಂ' ಆಲ್ಬಂ ಹಾಡನ್ನು ನಿರ್ದೇಶಿಸಿರುವ ಗಿರಿ ಗೌಡ, ತಾವು ನಿರ್ದೇಶಿಸುತ್ತಿರುವ ಎರಡನೇ ಚಿತ್ರ "ಥಗ್ಸ್ ಆ್ 1980' ಶೀರ್ಷಿಕೆ ಅನಾವರಣ ಮಾಡಿದರು. "ಹಳ್ಳಿಯಲ್ಲಿ ನಡೆಯುವ ಸಮುದ್ರ ತೀರದ ಕಥೆಯಿದು' ಎಂದರು. ನಟ ವರ್ಧನ್ ತೀರ್ಥಹಳ್ಳಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.