ಸಿನಿವಾಣಿ

‘ಮೂರು ಮತ್ತೊಂದು’ ಚಿತ್ರಕ್ಕೆ ಫುಟ್​ಬಾಲ್​ ಆಟಗಾರ್ತಿ ಮಮತಾ ನಾಯಕಿ

ಬೆಂಗಳೂರು: ವಿಪ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೀಣಾ ನಿರ್ಮಿಸುತ್ತಿರುವ ‘ಮೂರು ಮತ್ತೊಂದು’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಪ್ರಶಾಂತ್​ ಅಂಕಪುರ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಲವ್, ಸಸ್ಪೆನ್ಸ್ ಹಾಗೂ ಹಾರರ್ ಕಥಾಹಂದರ ಒಳಗೊಂಡಿದೆ. ವಿಶೇಷ ಏನೆಂದರೆ, ಈ ಚಿತ್ರಕ್ಕೆ ನಾಯಕಿಯಾಗಿ ಬೆಂಗಳೂರು ಮೂಲದ ಫುಟ್​ಬಾಲ್​ ಆಟಗಾರ್ತಿ ಮಮತಾ ನಾಯಕಿ!

ಹೌದು, ಈಗಾಗಲೇ ಮೈಸೂರು ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಮೂರು ಹಾಡುಗಳಿವೆ. ಮೂರು ಮತ್ತೊಂದು ಅಂದರೆ ಮೂವರ ನಡುವಿನ ಬರುವ ಮತ್ತೊಬ್ಬ ವ್ಯಕ್ತಿ ಸಸ್ಪೆನ್ಸ್.

ನಾಯಕಿ ಮಮತಾ, ಬಿಕಾಂ ಓದುತ್ತಿರುವ ವಿದ್ಯಾರ್ಥಿನಿ. ಬೆಂಗಳೂರು ಮೂಲದ ಈಕೆ ನೃತ್ಯ ನಾಟಕ, ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಬಳಿಕ ಗಣೇಶ್ ಫಿಲಂ ಡ್ಯಾನ್ಸ್ ಸೇರಿ ಅಲ್ಲಿ ನೃತ್ಯವನ್ನು ಕಲಿತಿದ್ದಾರೆ. ಈ ಬಗ್ಗೆ ಮಾತನಾಡುವ ಮಮತಾ, ‘ಪುಟ್ ಬಾಲ್ ಆಟಗಾರ್ತಿಯಾಗಿ ನಾನು ಒಬ್ಬಳಾಗಿ ರಾಷ್ಟ್ರದ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೆ. ಡ್ರೀಮ್ ಎ ಡ್ರೀಮ್ ಸಂಸ್ಥೆಯಿಂದ ಗೋವಾದಲ್ಲಿ ನಡೆದ ಆಟಗಾರ್ತಿಯಾಗಿ ಪಾಲ್ಗೊಂಡಿದೆ. ನಿರ್ದೇಶಕರು ಪರಿಚಯವಾದ ನಂತರ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ ಎಂಬುದು ಅವರ ಮಾತು.

ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಪಳನಿ ಸೇನಾಪತಿ ಸಂಗೀತ ,ಗಣೇಶ್ ಶೆಟ್ಟಿ ಚಿತ್ರಕಥೆ ಸಂಭಾಷಣೆ ಹಾಗೂ ಸಹಕಾರ ನಿರ್ದೇಶನವಿದೆ. ಹರಹರ ಮಹಾದೇವ, ಜೈ ಹನುಮಾನ್, ಮಹಾಕಾಳಿ, ಶನಿ, ಗಟ್ಟಿಮೇಳ, ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಾಜ್ ಮಣೀಶ್ ನಾಯಕ. ಚಿತ್ರದಲ್ಲಿ ಜಗದೀಶ್ ಇದ್ದಾರೆ. ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ.