ಸಿನಿವಾಣಿ

ವಂಚನೆ ಪ್ರಕರಣದಲ್ಲಿ ಖ್ಯಾತ ನಿರ್ಮಾಪಕನ ಬಂಧನ, ಡಿ. 25ರ ವರೆಗೂ ಕಸ್ಟಡಿಯಲ್ಲಿ...

ಮುಂಬೈ: ಡ್ರಗ್ಸ್​, ವಂಚನೆ, ಪೋರ್ನ್ ವಿಡಿಯೋ ಮುಂತಾದ ಕಾನೂನುಬಾಹಿರ ಚಟುವಟಿಕೆಗಳಿಂದ ಕಳಂಕಕ್ಕೆ ಒಳಗಾಗುತ್ತಿರುವ ಬಾಲಿವುಡ್ ಇದೀಗ ಮತ್ತೊಮ್ಮೆ ಅಂಥದ್ದೇ ಒಂದು ಪ್ರಕರಣದಿಂದ ಗಮನ ಸೆಳೆಯುವಂತಾಗಿದೆ. ಕಾರಣ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ಮಾಪಕರೊಬ್ಬರ ಬಂಧನವಾಗಿದೆ.

ಮುಂಬೈನ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ನಿರ್ಮಾಪಕರ ಬಂಧನವಾಗಿದೆ. ಖ್ಯಾತ ನಿರ್ಮಾಪಕ ಪರಾಗ್ ಸಂಘ್ವಿ ಬಂಧಿತ ನಿರ್ಮಾಪಕ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಪರಾಗ್ ಸಂಘ್ವಿಯನ್ನು ಡಿ. 25ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಅಲುಂಬ್ರ ಎಂಟರ್​ಟೇನ್​ಮೆಂಟ್ ಆ್ಯಂಡ್ ಲೋಟಸ್ ಫಿಲ್ಮ್ ಕಂಪನಿ ಸಿಇಒ ಆಗಿರುವ ಪರಾಗ್ ಸಂಘ್ವಿ, ಪಾರ್ಟ್​ನರ್​, ಭೂತ್​ ರಿಟರ್ನ್ಸ್​ ಮತ್ತು ದ ಅಟ್ಯಾಕ್ಸ್​ ಆಫ್​ 26/11 ಸಿನಿಮಾಗಳನ್ನು ನಿರ್ಮಿಸಿದ್ದರು.